ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ ಕೀರ್ತಿ : ಪ್ರೊ.ನಿತ್ಯಾನಂದ ಬಣ್ಣನೆ

bilkoduge
ವಯೋನಿವೃತ್ತರಾದ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಿಎ ಗಣೇಶ್ ಹೆಬ್ಬಾರ್, ಪ್ರೊ.ನಿತ್ಯಾನಂದ, ಬಿ.ಆರ್.ನಾಗರತ್ನಾ ರಾವ್, ಉದಯ ಕೆ.ಶೆಟ್ಟಿ ಎರ್ಮಾಳ್, ಸಂಜೀವ ನಾಯಕ್, ಮಂಜುನಾಥ್ ಎ.ವಿ., ಶ್ರೀಕಾಂತ್ ರಾವ್ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಆಧಾರಸ್ತಂಭವಾಗಿದ್ದರು. ಶಾಲೆ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಹೇಳಿದರು.

ಅದಮಾರಿನ ಪೂರ್ಣಪ್ರಜ್ಞ ಕಾಲೇಜಿನ ಶ್ರೀವಾಸುದೇವ ಸಭಾಂಗಣದಲ್ಲಿ ಶುಕ್ರವಾರ ವಯೋನಿವೃತ್ತರಾದ ಸಂಸ್ಥೆ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಗೌರವ ಕೋಶಾಧಿಕಾರಿ ಸಿಎ ಗಣೇಶ್ ಹೆಬ್ಬಾರ್, ನಿವೃತ್ತ ಪ್ರಾಂಶುಪಾಲ ಬಿ.ಆರ್.ನಾಗರತ್ನಾ ರಾವ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕೆ.ಶೆಟ್ಟಿ ಎರ್ಮಾಳ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಸ್ಥ ಮಂಜುನಾಥ್ ಎ.ವಿ., ಕನ್ನಡ ಮಾಧ್ಯಮ ಮುಖ್ಯಸ್ಥ ಶ್ರೀಕಾಂತ್ ರಾವ್ ಮಾತನಾಡಿದರು.

ಸಂಸ್ಥೆ ಹಳೇ ವಿದ್ಯಾರ್ಥಿ ಸಂಘ, ಅದಮಾರು ಆದರ್ಶ ಯುವಕ ಮಂಡಲ, ಯುವತಿ ಮಂಡಲ ಹಾಗೂ ಅಭಿಮಾನಿ ಬಳಗದಿಂದ ಚಂದ್ರಶೇಖರ ಶೆಟ್ಟಿ ಮತ್ತು ರೇಣುಕಾ ದಂಪತಿಯನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಸಂಜೀವ ನಾಯಕ್ ಸ್ವಾಗತಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿದರು. ಜಯಶಂಕರ್ ಕಂಗಣ್ಣಾರು ವಂದಿಸಿದರು.

ಯಾವುದೇ ಶಿಕ್ಷಣ ಸಂಸ್ಥೆ ಗುರುತಿಸಲ್ಪಡುವುದು ಪಠ್ಯ ಮತ್ತು ಪಠ್ಯೇತರ ಸಾಧನೆಯಿಂದ. ಅದರಲ್ಲೂ ಅದಮಾರು ಸಂಸ್ಥೆ ಪಠ್ಯ ಮತ್ತು ಪಠ್ಯೇತರ ಸಾಧನೆಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಅದಕ್ಕೆ ಉಪನ್ಯಾಸಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ್ ಅವರ ಕೊಡುಗೆ ಅಮೂಲ್ಯ.- ಸಿಎ ಗಣೇಶ್ ಹೆಬ್ಬಾರ್, ಗೌರವ ಕೋಶಾಧಿಕಾರಿ, ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net