Shirur Landslide : ಪೊಲೀಸ್‌ ಇಲಾಖೆ ವಿರುದ್ಧ ನ್ಯಾಯಾಂಗ ನಿಂದನಾ ಅರ್ಜಿ 1 ಪ್ರಣವಾನಂದ ಸ್ವಾಮೀಜಿ Warning

Shirur Landslide
Published on

ಕಾರವಾರ: Shirur Landslide ವಿಚಾರವಾಗಿ ಉತ್ತರ ಕನ್ನಡ ಪೊಲೀಸ್ ಇಲಾಖೆಯ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನಾ ಅರ್ಜಿ ದಾಖಲಿಸಲಾಗುವುದು ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಲದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಜಿಲ್ಲಾಽಕಾರಿ ಅವರಿಗೆ ಮನವಿ ಸಲ್ಲಿಸಿದ ನಂತರ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ ಹಾಗೂ ಗುತ್ತಿಗೆ ಕಂಪನಿ ಐಆರ್‌ಬಿ ನಿರ್ಲಕ್ಷ÷್ಯದಿಂದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿ, 11 ಜನ ನಾಪತ್ತೆಯಾಗಿದ್ದರು.

ಈ ಸಂಬಂಧ ಎನ್‌ಎಚ್‌ಎಐ, ಆರ್‌ಬಿ ಅಧಿಕಾರಿಗಳ ವಿರುದ್ಧ ನೆಪ ಮಾತ್ರಕ್ಕೆ ಅಂಕೋಲಾ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಯಾರದ್ದೇ ಹೆಸರಿಲ್ಲ. ಹಾಗಾಗಿ ಅಂಕೋಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದೆ. ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸಿ, ವರದಿ ನೀಡುವಂತೆ ಸ್ಪಷ್ಟ ಆದೇಶವನ್ನು ಅಂಕೋಲಾ ಪೊಲೀಸರಿಗೆ ನೀಡಿದೆ.

ಆದರೆ, ನ್ಯಾಯಾಲಯದ ಆದೇಶವಾಗಿ ಎರಡು ತಿಂಗಳಾದರೂ ಅಂಕೋಲಾ ಪೊಲೀಸರು ಪ್ರಕರಣವನ್ನೇ ದಾಖಲಿಸಿಲ್ಲ. ತನಿಖೆ ನಡೆಸಿ, ವರದಿ ಸಲ್ಲಿಸಿಲ್ಲ. ಈ ಬಗ್ಗೆ ದೂರಲು ಎಸ್‌ಪಿ ಅವರಿಗೆ ಕರೆ ಮಾಡಿದರೂ ಅವರು ಸ್ಪಂದನೆ ನೀಡುತ್ತಿಲ್ಲ. ಬದಲಾಗಿ, ನಮ್ಮ ವಿರುದ್ಧವೇ ಎಫ್‌ಐಆರ್ ಮಾಡಿದ್ದಾರೆ.

Shirur Landslide ನ್ಯಾಯಕ್ಕಾಗಿ ಎನ್‌ಎಚ್‌ಎಐ ವಿರುದ್ಧ ಹೊನ್ನಾವರದಲ್ಲಿ ನಾವು ಅನುಮತಿ ಪಡೆದು, ಪ್ರತಿಭಟನೆ ಮಾಡಿದ್ದಕ್ಕೆ ಪೊಲೀಸ್ ಇಲಾಖೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದೆ. ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎಸ್‌ಪಿ ಅವರ ನಡೆಯ ಬಗ್ಗೆಯೇ ಅನುಮಾನ ಮೂಡುತ್ತಿದೆ ಎಂದು ದೂರಿದರು. ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 25 ದಿನದ ಕಾರ್ಯಾಚರಣೆಯ ಖರ್ಚನ್ನು ನಾನು ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡಿದ್ದೇನೆ. ಸಾಮಾನ್ಯಕ್ಕಿಂತ ಹೆಚ್ಚು ಖರ್ಚು ವೆಚ್ಚಗಳು ಕಂಡುಬರುತ್ತಿದೆ. ಈ ಬಗ್ಗೆ ಅನುಮಾನ ಮೂಡುತ್ತಿದ್ದು, ತನಿಖೆ ನಡೆಸಬೇಕು ಎಂದು ಲೋಕಾಯುಕ್ತ ಕಚೇರಿಗೆ ಅಧಿಕೃತವಾಗಿ ದೂರು ನೀಡಿದ್ದೇನೆ ಎಂದು ತಿಳಿಸಿದರು. ಮಹಾ ಮಂಡಳದ ದೇವರಾಜ ನಾಯ್ಕ, ದಾಮೋದರ ನಾಯ್ಕ, ಶ್ರೀಧರ ನಾಯ್ಕ, ರಾಜೇಶ ನಾಯ್ಕ, ಜಗನ್ನಾಥ ನಾಯ್ಕ ಪುತ್ರಿ ಮನಿಷಾ ನಾಯ್ಕ, ಲೋಕೇಶ ನಾಯ್ಕ ಸಹೋದರ ಶ್ರೀನಿವಾಸ ನಾಯ್ಕ ಇದ್ದರು.

Shirur Landslide   ಅರ್ಜುನ್ ಬಗ್ಗೆ ಇದ್ದ ಕಾಳಜಿ ಸ್ಥಳೀಯರ ಮೇಲೆ ಏಕಿಲ್ಲ...?

ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರನ್ನು ಹುಡುಕುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಽಗಳಿಂದ ತಾರತಮ್ಯ ಕಾಣುತ್ತಿದೆ. ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಅವರ ಮೃತ ದೇಹ ಇದುವರೆಗೂ ಸಿಕ್ಕಿಲ್ಲ. ಕಾರ್ಯಾಚರಣೆಯಲ್ಲಿ ಸಿಕ್ಕ ಎರಡು ಎಲುಬುಗಳ ಡಿಎನ್‌ಎ ವರದಿ ಇನ್ನೂ ಬಂದಿಲ್ಲ. ಎಲುಬನ್ನು ಸರಿಯಾಗಿ ವಿಽ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸದ ವ್ಯಕ್ತಿಯ ವಿರುದ್ಧ ಇದುವರೆಗೂ ಕ್ರಮವಾಗಿಲ್ಲ. ಸ್ಥಳೀಯ ಶಾಸಕ ಸತೀಶ ಸೈಲ್ ಕೇರಳದ ಅರ್ಜುನ್ ಮನೆಗೆ ಹೋಗಿ ಬಂದರು. ಅವರಿಗೆ 1 ಲಕ್ಷ ರೂ. ಕೊಟ್ಟು ಬಂದರು. ಒಂದು ದಿನವೂ ಇದುವರೆಗೂ ಜಗನ್ನಾಥ ನಾಯ್ಕ ಅಥವಾ ಲೋಕೇಶ ನಾಯ್ಕ ಅವರ ಮನೆಗೆ ಹೋಗಿಲ್ಲ. ಈ ಬಗ್ಗೆ ಮಾತನಾಡಿದ್ದಕ್ಕೆ, ನನ್ನ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಎತ್ತಿ ಕಟ್ಟಿ ಸಮಾಜದಲ್ಲಿ ಒಡಕು ಮೂಡಿಸಲು ಸೈಲ್ ಯತ್ನಿಸುತ್ತಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net