

ಶಿವಮೊಗ್ಗ: ಕಾರಿನ ಡೋರ್, ಸ್ಟೆಪ್ನೀ, ಟೈರ್, ಸೀಟ್ ಸೇರಿದಂತೆ ಹಲವೆಡೆ ಗಾಂಜಾ ಬಚ್ಚಿಟ್ಟು ಸಾಗಿಸುತ್ತಿದ್ದವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದಿಂದ ಸಾಗಿಸುತ್ತಿದ್ದ ಸುಮಾರು ಆರೂವರೆ ಲಕ್ಷ ರೂಪಾಯಿ ಬೆಲೆಯ 21 ಕೆಜಿ ಗಾಂಜಾವನ್ನು ಇನ್ನೋವಾ ಕಾರಿನಲ್ಲಿ ದುಷ್ಕರ್ಮಿಗಳು ಸಾಗಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಕಾರನ್ನು ತಡೆದ ತುಂಗಾನಗರ ಪೊಲೀಸರು, ಗಾಂಜಾ ವಶಪಡಿಸಿಕೊಂಡಿದ್ದಾರೆ. ಅದನ್ನು ಸಾಗಿಸುತ್ತಿದ್ದ ದೌಲತ್, ಮುಜೀಬ್ ಖಾನ್, ಶೋಯೆಬ್ ಮತ್ತು ಜಫ್ರುಲ್ಲಾ ಎಂಬುವರನ್ನು ಬಂಧಿಸಿದ್ದಾರೆ.