

ಕಡಬ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿದ್ಯಾರ್ಥಿನಿ, ಕಡಬ ತಾಲೂಕಿನ ಕೊಣಾಜೆ ನಿವಾಸಿ ಶಿಲ್ಪಾ ಎಂ.ಆರ್. 2023-24ನೇ ಸಾಲಿನ ಸ್ನಾತಕೋತ್ತರ ಪದವಿ ಎಂ.ಕಾಂ.ನಲ್ಲಿ ಪ್ರಥಮ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಕಡ್ಯ ಕೊಣಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಪ್ರೌಢ ಶಿಕ್ಷಣ, ಪದವಿ ಪೂರ್ವ ಶಿಕ್ಷಣವನ್ನು ಕಡಬ ಸರಸ್ವತಿ ವಿದ್ಯಾಲಯ, ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮಾಡಿರುತ್ತಾರೆ. ಕಡಬ ತಾಲೂಕು ಕೊಣಾಜೆ ಗ್ರಾಮದ ಮನೆಜಾಲು ನಿವಾಸಿ, ಕಡಬ ಸಿ.ಎ.ಬ್ಯಾಂಕ್ ನಿರ್ದೇಶಕ ರಘುಚಂದ್ರ ಗೌಡ ಮತ್ತು ಭವಾನಿ ದಂಪತಿಯ ಪುತ್ರಿ.