

ಬೆಳ್ತಂಗಡಿ: ಶ್ರದ್ಧೆ, ಶಕ್ತಿ, ಧೈರ್ಯ ಮತ್ತು ಸಮಯ ಪಾಲನೆಯಿದ್ದರೆ ಯಾವುದೇ ಕಾರ್ಯ ಸುಸೂತ್ರವಾಗಿ ನೆರವೇರಲು ಸಾಧ್ಯ. ಸೇವಾ ಕಾರ್ಯಕ್ಕೆ ಎಂದೂ ನಿವೃತ್ತಿ ಎಂಬುದಿಲ್ಲ ಎಂದು ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್ ಹೇಳಿದರು.
ಬೆಳ್ತಂಗಡಿ ತಾಲೂಕು ಸರ್ಕಾರಿ ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆ ಬೆಳ್ತಂಗಡಿ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬೆಳ್ತಂಗಡಿ ಪಪಂ ಅಧ್ಯಕ್ಷ ಜಯಾನಂದ ಗೌಡ, ಮೈಸೂರು ವಿಭಾಗ ಸಂಘಟಕ ಡಾ.ಕೆ.ಜಯಕೀರ್ತಿ ಜೈನ್ ಮಾತನಾಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕ ದೇವರಾವ್ ಕ್ಷೀರಾಭಿಷೇಕ ನೆರವೇರಿಸಿದರು. ಕಲಾ ಪೋಷಕ ಬಿ.ಭುಜಬಲಿ ಧರ್ಮಸ್ಥಳ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವರಾಮ ಶಿಶಿಲ, ಕ.ರಾ.ಸ.ನಿವೃತ್ತ ನೌಕರರ ಸಂಘ ಪುತ್ತೂರು ವಿಭಾಗ ಅಧ್ಯಕ್ಷ ಐತಪ್ಪ ನಾಯ್ಕ, ಬಂಟ್ವಾಳ ಅಖಿಲ ಕರ್ನಾಟಕ ಹಿರಿಯ ಸೇವಾ ಪ್ರತಿಷ್ಠಾನ ಅಧ್ಯಕ್ಷ ನಾರಾಯಣ ಭಟ್, ಬೆಳ್ತಂಗಡಿ ಸ.ರಾ.ಸ. ನೌಕರರ ಸಂಘ ಅಧ್ಯಕ್ಷ ಜಯರಾಜ ಜೈನ್, ಉದ್ಯಮಿ ನಾಣ್ಯಪ್ಪ ಪೂಜಾರಿ ಬೆಳ್ತಂಗಡಿ, ಬೆಳ್ತಂಗಡಿ ಸ.ರಾ.ಸ.ನೌಕರರ ಸಂಘ ಮತ್ತು ಸೇವಾ ಟ್ರಸ್ಟ್ ಉಪಾಧ್ಯಕ್ಷ ಕುಸುಮಾವತಿ, ಖಜಾಂಚಿ ಜಗನ್ನಿವಾಸ ರಾವ್, ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಕೆ.ದಾಸಪ್ಪ ಗೌಡ, ಸಮನ್ವಯಕಾರ ವಸಂತ ಸುವರ್ಣ, ಸಂಯೋಜಕ ಬಿ.ಸೋಮಶೇಖರ ಶೆಟ್ಟಿ, ಆರ್ಥಿಕ ಸಮಿತಿ ಸಂಚಾಲಕ ಗಣೇಶ್ ಐತಾಳ್, ಶಾಶ್ವತ ಟ್ರಸ್ಟಿ ಅಚ್ಚಿನಡ್ಕ ವೀರಮ್ಮ, ಟ್ರಸ್ಟಿಗಳಾದ ಸೂರಪ್ಪ ಪೂಜಾರಿ, ಸನ್ಮತ್ ಕುಮಾರ್, ಸಂಘದ ಜತೆ ಕಾರ್ಯದರ್ಶಿ ವಾರಿಜ ಸುವರ್ಣ ಉಪಸ್ಥಿತರಿದ್ದರು.
ನಿವೃತ್ತ ನೌಕರರ ಸಂಘ ಮತ್ತು ಸೇವಾ ಸಂಸ್ಥೆ ಅಧ್ಯಕ್ಷ ಬಿ.ವಿಠಲ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ಕೆ.ವಸಂತ್ ರಾವ್ ನಿರೂಪಿಸಿದರು. ಕಾರ್ಯದರ್ಶಿ ವಿಶ್ವಾಸ್ ರಾವ್ ವಂದಿಸಿದರು. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ದಾನಿ ಅಚ್ಚಿನಡ್ಕ ವೀರಮ್ಮ ಕೊಡಮಾಡಿದ ಸ್ಥಳದಲ್ಲಿ 2 ಅಂತಸ್ತಿನ ಕಟ್ಟಡ ರಚನೆಯಾಗಲಿದೆ.