

ಬೆಳ್ತಂಗಡಿ: ಸಾಧನೆ ಸಾರ್ಥಕ ಬದುಕಿಗೆ ಅರ್ಥ ತರುತ್ತದೆ. ವಿದ್ಯಾರ್ಥಿ ಬದುಕಿನ ಉದ್ದಕ್ಕೂ ಸಾಧನೆಯ ಹಟ ಇರಬೇಕು. ಅಂತಹ ಸಾಧನೆಯ ಹಿಂದೆ ಯಾವುದೇ ಅಡೆತಡೆಗಳ ಬಗ್ಗೆ ಗಮನ ನೀಡಬಾರದು ಎಂದು ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕಿ ಶೈಲಜಾ ಎ.ಎನ್. ಹೇಳಿದರು.
ಬುಧವಾರ ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಸದಸ್ಯೆ ಪ್ರೀತಿತ ಧರ್ಮ ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಬಿನುತ ಬಂಗೇರ, ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ದೀಕ್ಷಾ, ಕಾರ್ಯದರ್ಶಿ ಆಶೀರ್ವಾದ್, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಕೀರ್ತೆಶ್, ಕಾರ್ಯದರ್ಶಿ ಸ್ವಾತಿ ಉಪಸ್ಥಿತರಿದ್ದರು.
ಜಿಲ್ಲಾಮಟ್ಟ, ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಭಯ ಕಾಲೇಜಿನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧಕರ ಬಹುಮಾನಿತರ ಪಟ್ಟಿಯನ್ನು ಭೌತಶಾಸ್ತ್ರ ಉಪನ್ಯಾಸಕಿ ಶ್ರುತಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಸೌಜನ್ಯಾ, ಗಣಕ ವಿಜ್ಞಾನ ಉಪನ್ಯಾಸಕಿ ಶುಭಲಕ್ಷ್ಮೀ, ಲೆಕ್ಕಶಾಸ್ತ್ರ ಉಪನ್ಯಾಸಕಿ ಶಾಹಿಸ್ತಾ ಬಾನು, ಇತಿಹಾಸ ಉಪನ್ಯಾಸಕಿ ಅಂಬಿಕಾ, ಅರ್ಥಶಾಸ್ತ್ರ ಉಪನ್ಯಾಸಕಿ ಬಬಿತಾ ರೈ, ರಾಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ವಾಚಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಸಮೀವುಲ್ಲಾ ವರದಿ ವಾಚಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲ ಸುಕೇಶ್ ಕುಮಾರ್ ವಂದಿಸಿದರು. ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.
ಕೆ.ವಸಂತ ಬಂಗೇರ ಅವರು ಕನಸು ಮನಸಲ್ಲೂ ಸದಾ ಯೋಚಿಸುತ್ತಿದ್ದ ಸಂಸ್ಥೆ ಇದು. ರಾಜ್ಯದಲ್ಲಿ ಮಾದರಿ ವಿದ್ಯಾ ಸಂಸ್ಥೆಯಾಗಿಸಬೇಕು ಎಂಬುದು ಅವರ ಕನಸಾಗಿದ್ದು, ಅವರ ಕನಸಿಗೆ ಆಕಾರ ಕೊಡುವುದೇ ನಮ್ಮ ಕೆಲಸ. ಮುಂದಿನ ವರ್ಷದಿಂದ ಪದವಿ ವಿಭಾಗದಲ್ಲಿ ಬಿಸಿಎ ತರಗತಿಯನ್ನು, ಪಿಯುಸಿ ವಿಭಾಗದಲ್ಲಿ ಸಂಖ್ಯಾಶಾಸ್ತ್ರವನ್ನು ಆರಂಭಿಸುತ್ತಿದ್ದೇವೆ. ಪ್ರೀತಿತ ಧರ್ಮ ವಿಜೇತ, ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಸದಸ್ಯೆ https://www.vijayavani.net/wild-boar-died-after-being-hit-by-a-vehicle https://www.vijayavani.net/bms-leaders-murder-case-re-investigated