ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ

8.npk-1
Published on

ನಾಪೋಕ್ಲು: ನೆಲಜಿ ಅಂಬಲ ಶಾಲಾ ಮೈದಾನದಲ್ಲಿ ಅಂಬಲ ಮಹಿಳಾ ಸಮಾಜದಿಂದ ಭಾನುವಾರ ಮೂರನೇ ವರ್ಷದ ಜಿಲ್ಲಾ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಪಂದ್ಯಾವಳಿ ಆಯೋಜಿಸಲಾಗಿತ್ತು.


ಪಂದ್ಯಾವಳಿಗೆ ನಿವೃತ್ತ ಸುಬೇದಾರ್ ಮೇಜರ್ ಬಾಳೆಯಡ ಅಪ್ಪಣ್ಣ ಚಾಲನೆ ನೀಡಿ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕೋವಿಯನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯುತವಾಗಿ ಬಳಸುವುದು ಮುಖ್ಯ. ಮಹಿಳಾ ಸಮಾಜ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.


ಅಂಬಲ ಮಹಿಳಾ ಸಮಾಜ ಅಧ್ಯಕ್ಷ ಅಪ್ಪುಮಣಿಯಂಡ ಡೇಸಿ ಸೋಮಣ್ಣ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಫಿ ಬೆಳೆಗಾರ ಎಳ್ತಂಡ ಬೋಪಣ್ಣ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣ್ಣಯ್ಯ , ದಿ ತಾಮರ ಕೊಡಗು ರೆಸಾರ್ಟ್ ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ಕಾಫಿ ಬೆಳೆಗಾರ ಕೋಟೆರ ಸುರೇಶ್, ಮಾಜಿ ಸೈನಿಕ ಮನವಟ್ಟಿರ ಸಾಬು ಉತ್ತಪ್ಪ, ಅಂಬಲ ಮಹಿಳಾ ಸಮಾಜದ ಸಲಹಾ ಸಮಿತಿ ಅಧ್ಯಕ್ಷೆ ಮನವಟ್ಟಿದ ಕಮಲ ಬೆಳ್ಳಿಯಪ್ಪ ಉಪಸ್ಥಿತರಿದ್ದರು.


ನಾಪೋಕ್ಲು ಕೊಡುವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣ್ಣಯ್ಯ, ನಿರ್ದೇಶಕಿ ಝಾನ್ಸಿ ಮಂದಪ್ಪ , ಗ್ರಾಮ ಪಂಚಾಯಿತಿ ಉಪ ಅಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net