ಶೆಟ್ಟಿಹಳ್ಳಿ ಬಳಿ ಅಪರಿಚಿತನ ಅಸ್ಥಿಪಂಜರ ಪತ್ತೆ

WEB 1
Published on

ಚಿಂತಾಮಣಿ: ತಾಲೂಕಿನ ಅಂಬಾಜಿದುರ್ಗ ಹೋಬಳಿ ಶೆಟ್ಟಿಹಳ್ಳಿ ಹೊರವಲಯದ ಗುಡ್ಡದ ಪ್ರದೇಶದಲ್ಲಿ ಸುಮಾರು 40 ವರ್ಷದ ಅಪರಿಚಿತನ ಅಸ್ಥಿಪಂಜರ ಪತ್ತೆಯಾಗಿದೆ.

ಭಾನುವಾರು ಕುರಿ ಮೇಯಿಸಲು ಹೋಗಿದ್ದ ಶೆಟ್ಟಿಹಳ್ಳಿ ಕುರಿಗಾಹಿಗಳು ದುರ್ನಾತದ ಜಾಡು ಹಿಡಿದು ಹೋದಾಗ ಅಸ್ಥಿಪಂಜರ ಕಂಡುಬಂದಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸೋಮವಾರ ಇನ್‌ಸ್ಪೆಕ್ಟರ್ ಶಿವರಾಜ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಶವದ ಗುರುತು ಪತ್ತೆಗಾಗಿ ಚಿಕ್ಕಬಳ್ಳಾಪುರದಿಂದ ಸೊಕೊ - ಖಇ (ಖ್ಚಛ್ಞಿಛಿ ಣ್ಛ ಇ್ಟಜಿಞಛಿ ಇ್ಛ್ಛಜ್ಚಿಛ್ಟಿ)

ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಅಸ್ಥಿಪಂಜರ ಇದ್ದ ಸ್ಥಳದ ಅಕ್ಕಪಕ್ಕ ಬಿದ್ದಿದ್ದ ಮದ್ಯದ ಬಾಟಲ್, ಟೆಟ್ರಾ ಪ್ಯಾಕೆಟ್‌ಗಳನ್ನು ಸಂಗ್ರಹಿಸಿದೆ. ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿರಬಹುದೇ ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನು ಈ ಸ್ಥಳದಲ್ಲಿ ಎಸೆದು ಹೋಗಿದ್ದಾರೆಯೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net