ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ ಕುರಿ, ಮೇಕೆಯನ್ನೂ ಬಿಡ್ತಿರಲಿಲ್ಲ!

Kuri_Kalla
Published on

ತುಮಕೂರು: ಚಿನ್ನಾಭರಣ ದೋಚಿದ್ದು ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಕುರಿ, ಮೇಕೆ ಕಳವು ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾರೆ!

ಜಿಲ್ಲೆಯ ವಿವಿಧ ಕಡೆಗಳಲ್ಲಿ ಕುರಿ, ಮೇಕೆ ಹಾಗೂ ಚಿನ್ನಾಭರಣ ದೋಚುತ್ತಿದ್ದ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಕುಣಿಗಲ್ ತಾಲೂಕು ಅಮೃತೂರು ಪೊಲೀಸರು ಬಂಧಿಸಿದ್ದಾರೆ.

ಮಾರ್ಕೋನಹಳ್ಳಿ ಲೀಲಾವತಿ ಎಂಬುವವರ ಮನೆಗೆ ನುಗ್ಗಿದ ಕಳ್ಳರು 180 ಗ್ರಾಂ ಚಿನ್ನದ ಒಡವೆಗಳನ್ನು ಕದ್ದಿದ್ದ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರ ಮುಂದೆ ಆರೋಪಿಗಳು ಅಮೃತೂರು, ತುರುವೇಕೆರೆ, ಹಿರಿಸಾವೆ, ಬಾಣವಾರ, ಸಿರಾ, ಪಟ್ಟನಾಯಕನಹಳ್ಳಿ, ತಾವರೆಕೆರೆ, ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುರಿ, ಮೇಕೆ ಕದ್ದಿರುವ ಪ್ರಕರಣಗಳನ್ನು ವಿವಿಧ ಕಳ್ಳತನದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಹೊಸದುರ್ಗ ತಾಲೂಕು ಗಂಜಿಗೆರೆಯ ಮಂಜಪ್ಪ(50), ರಂಗಪ್ಪ(43), ಲೋಕೇಶ(43), ಹೊಸದುರ್ಗ ಪಟ್ಟಣದ ಮಾರುತಿನಗರದ ವೆಂಕಟೇಶ(37), ಹಿರಿಯೂರು ತಾಲೂಕು ಮಾರಿಕಣಿವೆಯ ನವೀನ(27), ಹುಣುಸೆಕಟ್ಟೆಯ ರವಿ(35) ಬಂಧಿತ ಕಳ್ಳರು. ಆರೋಪಿಗಳಿಂದ 55 ಲಕ್ಷ ರೂ., ಬೆಲೆ ಬಾಳುವ 616 ಗ್ರಾಂ ಚಿನ್ನದ ಒಡವೆಗಳನ್ನು ಹಾಗೂ 108 ಕುರಿ, ಮೇಕೆ ಹಾಘೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net