ಬೀದಿನಾಯಿ ದಾಳಿಯಿಂದ ಕುರಿ ಸಾವು

ಬೀದಿನಾಯಿ ದಾಳಿಯಿಂದ ಕುರಿ ಸಾವು
Published on

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳ ದಾಳಿಗೆ ಒಂದು ಕುರಿ ಮೃತಪಟ್ಟಿದೆ.

ಗ್ರಾಮದ ಮಹದೇವಸ್ವಾಮಿ ಎಂಬುವರು ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ನಾಯಿಗಳು ಕುರಿ ಮಂದೆ ಮೇಲೆ ದಾಳಿ ಮಾಡಿವೆ. ಈ ವೇಳೆ ಒಂದು ಕುರಿ ಸಾವಿಗೀಡಾಗಿದ್ದು, ಎರಡು ಕುರಿಗಳು ಗಾಯಗೊಂಡಿವೆ.

ಗ್ರಾಮದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಂಬಂಧಿಸಿದವರು ಕ್ರಮ ವಹಿಸುವಂತೆ ಮಹದೇವಸ್ವಾಮಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net