ಶೇಡಿಮನೆ ನಾರಾಯಣ ಮಾಸ್ಟರ್ ಸಾಧಕ ಪ್ರಶಸ್ತಿ ಪ್ರದಾನ

pasha
Published on

ಆರ್ಡಿ: ಶೇಡಿಮನೆ ಪಾಟ್ಲಮಕ್ಕಿ ನಿತೀಶ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ನಿತೀಶ್ ನಾರಾಯಣ ಸ್ಮಾರಕ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಅವರಿಗೆ ಶೇಡಿಮನೆ ನಾರಾಯಣ ಮಾಸ್ಟರ್ ಸಾಧಕ ಪ್ರಶಸ್ತಿಯನ್ನು ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮಂಗಳವಾರ ಪ್ರದಾನ ಮಾಡಿದರು.

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಳ ಆನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ, ಶೇಡಿಮನೆ ನಿತೀಶ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಚೆನ್ನ ಪೂಜಾರಿ, ಹೆಬ್ರಿ ಎಸ್‌ಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ ಶೆಟ್ಟಿ, ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ಬಿಲ್ಲವ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ, ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಕ್ರಮಧಾರಿ ಅರಸಮ್ಮಕಾನು, ನಿತೀಶ್ ಮೆಮೋರಿಯಲ್ ಟ್ರಸ್ಟ್ ಪದಾಧಿಕಾರಿಗಳು, ನಿವೃತ್ತ ಶಿಕ್ಷಕ ದಿ.ನಾರಾಯಣ ಪೂಜಾರಿ ಪಾಟ್ಲಮಕ್ಕಿ ಕುಟುಂಬಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net