ಶೌರ್ಯ ವಿಪತ್ತು ನಿರ್ವಹಣಾ ಘಟಕ ವಾರ್ಷಿಕೋತ್ಸವ

New Project (24)
Published on

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಾರ್ಷಿಕೋತ್ಸವ ಮಂಗಳವಾರ ಇಚ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಹೊರಠಾಣಾ ಹೆಡ್ ಕಾನ್‌ಸ್ಟೇಬಲ್ ಪ್ರವೀಣ್ ಕೆ.ಎಲ್. ಉದ್ಘಾಟಿಸಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ನೆಲ್ಯಾಡಿ ಶಾಖೆ ಉಪವಲಯ ಅರಣ್ಯಾಧಿಕಾರಿ ಕೆ.ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಡಬ ತಾಲೂಕಿನ ಕ್ಯಾಪ್ಟನ್ ಭವಾನಿ ಶಂಕರ್, ಪ್ರಶಾಂತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯಾಧ್ಯಕ್ಷ ಕುಶಾಲಪ್ಪ ಗೌಡ ಶುಭಹಾರೈಸಿದರು. ನೆಲ್ಯಾಡಿ ಶಾಖೆ ಗಸ್ತು ಅರಣ್ಯ ಪಾಲಕ ದೇವಿಪ್ರಸಾದ್ ಶೌರ್ಯ ಸ್ವಯಂಸೇವಕರಿಗೆ ಮಾಹಿತಿ ನೀಡಿದರು. ನೆಲ್ಯಾಡಿ ಶಾಖೆ ಅರಣ್ಯ ವೀಕ್ಷಕ ಡಿ.ಪಿ.ಜನಾರ್ದನ, ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಸದಸ್ಯ ತುಕಾರಾಮ ರೈ ಹೊಸಮನೆ ಮೊದಲಾದವರಿದ್ದರು.

ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಡಿ.ಬಿ. ನಿರೂಪಿಸಿದರು. ಶೌರ್ಯದ ವಾರ್ಷಿಕ ವರದಿಯನ್ನು ಘಟಕ ಸಂಯೋಜಕಿ ನಮಿತಾ ಎಸ್. ಶೆಟ್ಟಿ ವಾಚಿಸಿದರು. ಘಟಕ ಸ್ವಯಂಸೇವಕಿ ಅಮಿತಾ ಸ್ವಾಗತಿಸಿದರು. ಇಚ್ಲಂಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವೇದಾ ಪಿ.ವಂದಿಸಿದರು.

 ಸದಸ್ಯರಿಗೆ ಗೌರವಾರ್ಪಣೆ

ಶೌರ್ಯ ಘಟಕದ ಸ್ವಯಂಸೇವಕರಿಗೆ ನೆಲ್ಯಾಡಿ ಒಕ್ಕೂಟ ಸೇವಾಪ್ರತಿನಿಧಿ ಹೇಮಾವತಿ ಜೆ. ವತಿಯಿಂದ ಗೌರವಿಸಲಾಯಿತು. ವಲಯದ ಎಲ್ಲಾ ಒಕ್ಕೂಟ ಅಧ್ಯಕ್ಷರ ವತಿಯಿಂದ ಮೊಬೈಲ್ ಕವರ್ ಹಾಗೂ ಕ್ಯಾಪ್‌ಗಳನ್ನು ಘಟಕದ ಸದಸ್ಯರಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net