

ಶಕ್ತಿಪೀಠ ಸನ್ನತಿಯಲ್ಲಿ ಶತ್ರು ಸಂಹಾರ ಪೂಜೆ..ಭಾರತದ ಗೆಲುವಿಗೆ ಸಂಕಲ್ಪ
ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂಧೂರ ಯುದ್ಧ ಹಿನ್ನಲೆ ಚಿತ್ತಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಸನ್ನತಿಯ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಭಾರತದ ಗೆಲುವಿಗೆ ವಿಶೇಷ ಸಂಕಲ್ಪ ಮಾಡಲಾಯಿತು.ದೇಗುಲದ ಅರ್ಚಕ ಗೋಪಾಲ್ ಆಚಾರ್ಯರು ಶತ್ರು ಸಂಹಾರ ಶ್ಲೋಕ ಪಠಿಸಿ ದೇವಿಗೆ ವಿಶೇಷ ಪ್ರಾರ್ಥನೆ ಮಾಡುವುದರ ಮೂಲಕ ಸಂಕಲ್ಪ ಮಾಡಿದ್ರು.. ಭಾದಪ್ರಶಮನಂ ತ್ರಲೋಕೇಶ್ ಶಾಖಿಲೇಶ್ವರಿ ಯೆವ ಮೇವ ತ್ವಯಾ ಕಾರ್ಯo,ಅಸ್ಮದ್ದ ವೈರೀ ವಿನಾಶನಂ ದೇವಿ ಸಪ್ತಶತಿಯ ಶ್ಲೋಕದಲ್ಲಿ ಬರುವಂತಹ ಈ ಶ್ಲೋಕವು ಶತ್ರು ಸಂಹಾರ ಮಾಡುವುದಕ್ಕಾಗಿ ಈ ಮಂತ್ರವನ್ನು ಉಪಯೋಗ ಮಾಡಲಾಗುತ್ತದೆ ಈ ಸಂದರ್ಭದಲ್ಲಿ ಯೋಧರವು ಯುದ್ಧದಲ್ಲಿ ಜಯ ಸಾಧಿಸುವುದಕ್ಕೆ ಮತ್ತು ಯೋಧರ ಹಿತಕ್ಕಾಗಿ ದೇಶದ ಹಿತಕ್ಕಾಗಿ ಶತ್ರು ಸಂಹಾರ ಶ್ಲೋಕದಿಂದ ಶ್ರೀ ಚಂದ್ರಲಾಂಬ ದೇವಿಗೆ ಇಂದು ನಾವು ನಿತ್ಯವೂ ಯೋಧರ ಹೆಸರಿನಲ್ಲಿ ಸೇನೆಯ ಹೆಸರಿನಲ್ಲಿ ಶ್ರೀದೇವಿಗೆ ನಿತ್ಯವೂ ಸಂಕಲ್ಪ ಮಾಡಲಾಗುತ್ತಿದೆ ಮಂತ್ರಾದಿನಂ ಜಗತ್ ಸರ್ವಂ ಮಂತ್ರದ ಆಧೀನದ ಮೇಲೆ ಜಗತ್ತು ಇರುವುದರಿಂದ ಆ ಮಂತ್ರಗಳನ್ನು ಉಪಯೋಗಿಸಿ ಶತ್ರು ಸಂಹಾರ ಮಾಡುವುದಕ್ಕೆ ನಾವು ಕೂಡ ದೇಶದ ಸೇವೆಯನ್ನು ಸಲ್ಲಿಸುತ್ತೇವೆ ಜೈ ಹಿಂದ್ ಭಾರತ್ ಮಾತಾ ಕಿ ಜೈ ಅಂತ ಘೋಷಣೆ ಹಾಕಿ ಪ್ರಾರ್ಥಿಸಿದರು..