ಜಗತ್ತಿಗೆ ದಾರಿದೀಪ ಹಿಂದು ಧರ್ಮ : ಕುಂಟಾರು ರವೀಶ್ ತಂತ್ರಿ ಬಣ್ಣನೆ

17
Published on

ಬಂಟ್ವಾಳ: ಭಾರತವು ಧರ್ಮದಿಂದ ಗುರುತಿಸಲ್ಪಟ್ಟ ರಾಷ್ಟ್ರ. ಹಿಂದು ಧರ್ಮ ಆಧ್ಯಾತ್ಮಿಕ ಶಕ್ತಿಯ ನೆಲೆ. ಜಗತ್ತಿಗೆ ಗುರುವಿನ ಸ್ಥಾನದಲ್ಲಿ ಅಲಂಕರಿಸುವ ಶಕ್ತಿ ಭಾರತದ ಪುಣ್ಯ ಮಣ್ಣಿಗಿದೆ. ಹಿಂದು ಧರ್ಮದ ಮರ್ಮ ಜಗತ್ತಿಗೆ ದಾರಿದೀಪ ಎಂದು ಕುಂಟಾರು ರವೀಶ್ ತಂತ್ರಿ ಹೇಳಿದರು.

ಸುಜೀರು ಶ್ರೀರಾಮ ವೈದ್ಯನಾಥ ಭಜನಾ ಮಂದಿರದ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಶತ ರುದ್ರಯಾಗದ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ರೋಟರಿ ಮಾಜಿ ಗವರ್ನರ್ ಪ್ರಕಾಶ್ ಕಾರಂತ, ಅಧ್ಯಕ್ಷತೆ ವಹಿಸಿದ್ದ ಸುಜೀರು ಗುತ್ತಿನ ರಾಮಕೃಷ್ಣ ಚೌಟ, ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಶುಭ ಹಾರೈಸಿದರು. ರವೀಂದ್ರ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂದಿರದ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಮಹೋತ್ಸವ ಸಮಿತಿ ಅಧ್ಯಕ್ಷ ಐತ್ತಪ್ಪ ಆಳ್ವ ಸುಜೀರುಗುತ್ತು, ಶ್ರೀ ಅರಸು ವೈದ್ಯನಾಥ ದೈವದ ಪಾತ್ರಿ ಮೋನಪ್ಪ ಯಾನೆ ಮುಂಡ ಪೂಜಾರಿ ಉಪಸ್ಥಿತರಿದ್ದರು. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಕಂಬಳಿ ಅವರನ್ನು ಅಭಿನಂದಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು ಸ್ವಾಗತಿಸಿದರು. ಕೋಶಾಧಿಕಾರಿ ಪ್ರಮೋದ್ ಕುಮಾರ್ ವಂದಿಸಿದರು. ಉಮೇಶ್ ಕೋಟ್ಯಾನ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ನವಗ್ರಹ ಸಹಿತ ರುದ್ರಯಾಗ ಪ್ರಾರಂಭವಾಗಿ ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನೆರವೇರಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net