ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ

New Project (10)
Published on

ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಅರವತ್ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಶನಿವಾರ ಮತ್ತು ಭಾನುವಾರ ನೆರವೇರಿತು.

ಪ್ರಥಮ ದಿನ ಅಭಿಷೇಕ ಪೂಜೆ, ಉಷಃಪೂಜೆ, ಗಣಹೋಮ, ಕಲಶಪೂಜೆ, ಶ್ರೀ ದೇವರಿಗೆ ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ, ವಿಧಾತ್ರಿ ಭಟ್ ಅಬ್ರಾಜೆ ಬಳಗದವರಿಂದ ಸಂಗೀತಾರ್ಚನೆ ಜರುಗಿತು. ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ನಡೆಯಿತು.

ರಾತ್ರಿ ಶ್ರೀ ಭೂತಬಲಿ, ಶ್ರೀ ಪದ್ಮನಾಭ ಮನೋಳಿತ್ತಾಯ ಮತ್ತು ಬಳಗದವರಿಂದ ವೇದಮಂತ್ರ ಪಠಣ, ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆ ಗುರುಗಳಾದ ಉಷಾ ಈಶ್ವರ ಭಟ್ ಮತ್ತು ಶಿಷ್ಯರಿಂದ ಸಂಗೀತ ಸೇವೆ, ರಾಜಾಂಗಣದಲ್ಲಿ ನೃತ್ಯ ಸೇವೆ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರುಗಿ ಬಂದ ಬಳಿಕ ಕಟ್ಟೆಪೂಜೆ ಜರುಗಿತು. ಉತ್ಸವದ ಅಂಗವಾಗಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿಯಿಂದ ಯಕ್ಷಗಾನ ಬಯಲಾಟ ಸೇವೆ ಜರುಗಿತು.

ದ್ವಿತೀಯ ದಿನ ಬೆಳಗ್ಗೆ ಅಭಿಷೇಕ ಪೂಜೆ, ಉಷಃಪೂಜೆ, ಶಿವೇಲಿ, ರಾಜಾಂಗಣದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ಭೋಜನ ಜರುಗಿದವು. ಮಧ್ಯಾಹ್ನ ವಿಷ್ಣುಮೂರ್ತಿ ದೈವದ ಕೋಲ ಜರುಗಿ ದೈವಾರಾಧನೆ ಸಂಪನ್ನವಾಯಿತು. ಗಿರೀಶ ಅಡಿಗ ಕರಿಚೇರಿ, ಮುರಳಿ ಅಡಿಗ ಕೂಡ್ಲು ಅವರಿಂದ ದೇವರ ನೃತ್ಯಸೇವೆ, ದರ್ಶನ ಬಲಿ ಜರುಗಿತು. ರಾತ್ರಿ ಶ್ರೀರಂಗಪೂಜೆ ನೆರವೇರಿತು. ಕ್ಷೇತ್ರ ಪ್ರಬಂಧಕ ಎನ್.ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು. ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಮಯ್ಯ ವೈದಿಕ ವಿಭಾಗ ಕಾರ್ಯ ನಿರ್ವಹಣೆಯಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net