ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸಂಭ್ರಮ

Published on

ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಡಿ.7 ಹಾಗೂ 8ರಂದು ಜರುಗಲಿದೆ.

7ರಂದು ಶನಿವಾರ ಬೆಳಗ್ಗೆ ಅಭಿಷೇಕ, ಗಣಹೋಮ, ನವಕಾಭಿಷೇಕ, 10.30ರಿಂದ ವಿಧಾತ್ರಿ ಭಟ್ ಅಬ್ರಾಜೆ ಅವರಿಂದ ಸಂಗೀತಾರ್ಚನೆ, ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 6ಕ್ಕೆ ಮೂಡುಮನೆ ಬಳ್ಳುಳ್ಳಾಯ ತರವಾಡಿನಿಂದ ಶ್ರೀವಿಷ್ಣುಮೂರ್ತಿ ದೈವಗಳ ಭಂಡಾರ ಆಗಮನ, ಸಂಜೆ 6.30ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ 7ಕ್ಕೆ ಮಹಾಪೂಜೆ, ಶ್ರೀಭೂತಬಲಿ, ರಾಜಾಂಗಣದಲ್ಲಿ ನೃತ್ಯಸೇವೆ, ಕೋಟೂರು ಕಟ್ಟೆ ಸವಾರಿ, ರಾತ್ರಿ 9.30ರಿಂದ ಯಕ್ಷಗಾನ, ಡಿ.8ರಂದು ಬೆಳಗ್ಗೆ 10ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನದಾನ, ಶ್ರೀವಿಷ್ಣುಮೂರ್ತಿ ದೈವಕೋಲ, ರಾತ್ರಿ 7ರಿಂದ ಶ್ರೀರಂಗಪೂಜೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net