ಸಾಧಿಸುವ ಛಲವಿದ್ದರೆ ಗೆಲುವು ಖಂಡಿತ : ಮುಖ್ಯ ಭಗಿನಿ ಲೀನಾ ಪಿರೇರ ಹೇಳಿಕೆ ವಾರ್ಷಿಕ ಕ್ರೀಡಾಕೂಟ

blank

ಗುರುಪುರ: ಕ್ರೀಡೆಗಳಲ್ಲಿ ಸೋಲುಗೆಲುವಿನ ಪಾಠವಿದೆ. ಜೀವನದಲ್ಲಿ ಇವು ಹಾಸುಹೊಕ್ಕಾಗಿದೆ. ಶಿಸ್ತು ಮತ್ತು ಕೌಶಲ್ಯದೊಂದಿಗೆ ಗುರಿ ಸಾಧಿಸುವ ಛಲವಿದ್ದಲ್ಲಿ ಗೆಲುವು ಖಂಡಿತ. ಮಾನವೀಯ ಗುಣ ಬೆಳೆಸುವಲ್ಲಿ ಶಾಲಾ ಮಟ್ಟದಲ್ಲಿ ಆಯೋಜಿಸುವ ವಾರ್ಷಿಕ ಕ್ರೀಡಾಕೂಟ ನೆರವಾಗುತ್ತವೆ ಎಂದು ರೋಸಾ ಮಿಸ್ತಿಕಾ ಕಾನ್ವೆಂಟ್‌ನ ಮುಖ್ಯ ಭಗಿನಿ ಲೀನಾ ಪಿರೇರ ಹೇಳಿದರು.

ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ, ಪ್ರೌಢಶಾಲೆ 2 ದಿನಗಳ ಜಂಟಿ ‘ವಾರ್ಷಿಕ ಕ್ರೀಡಾಕೂಟ 2024-25’ಕ್ಕೆ ಶಾಲಾ ಮೈದಾನದಲ್ಲಿ ಕ್ರೀಡಾ ಧ್ವಜಾರೋಹಣ, ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ, ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ರೋಸಾ ಮಿಸ್ತಿಕಾ ಸಮೂಹ ಸಂಸ್ಥೆ ಸಂಚಾಲಕಿ ರೋಸ್ ಲೀಟಾ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಮಾಜಿ ಸದಸ್ಯ, ಗಂಜಿಮಠ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ಆಯ್ಕೆಯಾದ ಸದಸ್ಯ ಸುನೀಲ್ ಗಂಜಿಮಠ, ಹಳೇ ವಿದ್ಯಾರ್ಥಿ ಸಂಘ ಕೋಶಾಧಿಕಾರಿ, ಮೆಲ್ವಿನ್ ಸಲ್ಡಾನ, ಹಳೇ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಲ.ಜೆಫ್ರಿಯನ್ ತಾವ್ರೊ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಕ್ಷಕ ಸಂಘ ಉಪಾಧ್ಯಕ್ಷೆ ನಮಿತಾ, ಪ್ರೌಢಶಾಲಾ ಶಿಕ್ಷಕರಕ್ಷಕ ಸಂಘ ಉಪಾಧ್ಯಕ್ಷೆ ಗೀತಾ, ಹಳೇ ವಿದ್ಯಾರ್ಥಿ ಸಂಘ ಪದಾಧಿಕಾರಿ ವೆಲೆರಿಯನ್, ರೋಸಾ ಮಿಸ್ತಿಕಾ ಪದವಿಪೂರ್ವ ಕಾಲೇಜು ಉಪನ್ಯಾಸಕರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೀಡಾಕೂಟ ಆರಂಭಕ್ಕೆ ಮುನ್ನ ಕ್ರೀಡೆಯಲ್ಲಿ ಶಾಲೆಗೆ ಕೀರ್ತಿ ತಂದಿರುವ ಸತ್ಯಂ ಹಾಗೂ ವಿದ್ಯಾರ್ಥಿನಿಯರ ತಂಡಕ್ಕೆ ಅಭಿನಂದನೆ ಸಲ್ಲಿಸಲಾಯಿತು. ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಲಿಲ್ಲಿ ಡಿಸೋಜ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಐರಿನ್ ಸ್ಟೆಲ್ಲಾ ಡಿಸೋಜ, ಪ್ರೌಢಶಾಲೆ ಶಿಕ್ಷಕಿ ಸಬೀನಾ ಕ್ರಾಸ್ತ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರಾ ಕ್ರೀಡಾಕೂಟ ನಿರ್ವಹಿಸಿದರು. ರೋಸಾ ಮಿಸ್ತಿಕಾ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಮರಿಸ್ಸಾ ಲೂಸಿ ವಂದಿಸಿದರು.

ವಿದ್ಯಾಸಂಸ್ಥೆಯಲ್ಲಿ ನಡೆಯುವ ಕ್ರೀಡಾಕೂಟ ಶಾಲಾ ಪರಿಸರದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸುವಂತೆ, ವಿದ್ಯಾರ್ಥಿಗಳ ಜೀವನವೂ ಉತ್ಸಾಹದಿಂದ ಕೂಡಿರಲಿ. ಜೀವನ ಒಂದು ಸ್ಪರ್ಧೆ ಇದ್ದಂತೆ. ಚಿಂತನಾಶೀಲರಾದಾಗ ಮಾತ್ರ ಪ್ರತಿಯೊಂದು ವಿಷಯದಲ್ಲೂ ಯಶಸ್ಸು ಕಾಣುವಿರಿ.

ರೋಸ್ ಲೀಟಾ, ರೋಸಾ ಮಿಸ್ತಿಕಾ ಸಮೂಹ ಸಂಸ್ಥೆ ಸಂಚಾಲಕಿ

ನ್ಯಾಯಕ್ಕಾಗಿ ಗ್ರಾಮ ಪಂಚಾಯಿತಿಗೆ ಮೊರೆ : ಎಂಎಲ್ಸಿ ವಿರುದ್ಧ ಆಕ್ರೋಶ ಕೇಸು ದಾಖಲಿಸಲು ಆಗ್ರಹ

https://www.vijayavani.net/distribution-of-bench-desk-to-tandrakere-school

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…