ಕಾಟುಕುಕ್ಕೆ ಸುಬ್ರಾಯ ದೇವಳದಲ್ಲಿ ಷಷ್ಠಿ ಜಾತ್ರೆ ಆರಂಭ

New Project (9)
Published on

ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವ ಬುಧವಾರ ಕ್ಷೇತ್ರ ತಂತ್ರಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಆರಂಭಗೊಂಡಿತು.

ಉಷಃಪೂಜೆ, ಗಣಪತಿ ಪೂಜೆ, ಕಾರ್ತಿಕ ಲಕ್ಷದೀಪೋತ್ಸವದಂದು ಸಾಂಪ್ರದಾಯಿಕವಾಗಿ ಉಬ್ಬೆ ಹಾಕಿದ ಬಾಳೆಗೊನೆಗಳನ್ನು ತೆಗೆಯುವ ಕ್ರಮದೊಂದಿಗೆ ಉಗ್ರಾಣ ತುಂಬಿಸುವುದು, ಮಧ್ಯಾಹ್ನ ಮಹಾಪೂಜೆ, ದೇವರ ಬಲಿ ಜರುಗಿತು. ಕ್ಷೇತ್ರದ ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲುಗುತ್ತು, ಮೊಕ್ತೇಸರರಾದ ಗಿರೀಶ್ ಕುಮಾರ್ ಕಾಟುಕುಕ್ಕೆ, ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರವಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ, ಕ್ಷೇತ್ರ ಅರ್ಚಕ ಮಧುಸೂದನ ಪುಣಿಂಚಿತ್ತಾಯ, ಉತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೋಡುಮಾಡು, ಮಾಜಿ ಮೊಕ್ತೇಸರರಾದ ವಿಷ್ಣು ಪ್ರಕಾಶ್ ಪಿಲಿಂಗಲ್ಲು, ನಾರಾಯಣ ಮಣಿಯಾಣಿ, ಮಿತ್ತೂರು ಪುರುಷೋತ್ತಮ ಭಟ್, ರಘುನಾಥ ರೈ ಕಟ್ಟತ್ತಾಡೆ ಮೊದಲಾದವರು ಭಾಗವಹಿಸಿದ್ದರು.

7ರಂದು ಷಷ್ಠಿ ಮಹೋತ್ಸವ ಜರುಗಲಿದೆ. ಬೆಳಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ, ಮಡೆಸ್ನಾನ, ಸಂಜೆ 4.30ರಿಂದ ಬೀದಿ ಮಡೆಸ್ನಾನ, ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀಭೂತಬಲಿ, ರಥೋತ್ಸವ, ಬೆಡಿ, ಉತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net