

ಪುತ್ತೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ ವ್ಯಕ್ತಿಯ ಪತ್ನಿ ಮನೆಗೆ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದಾರೆ.
ಕೊಲೆಯ ಸಂದರ್ಭ ಅಬೂಬಕ್ಕರ್ ಸಿದ್ದಿಕ್ ಸ್ಥಳದಲ್ಲೇ ಇದ್ದು, ಆರೋಪಗಳಿಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದು, ಸದ್ಯ ತಲೆ ಪರೆಸಿಕೊಂಡಿದ್ದಾನೆ. ಸರ್ಚ್ ವಾರೆಂಟ್ ಪಡೆದ ಎನ್ ಐ ಎ ಪೋಲೀಸರು, ಸಂಪ್ಯ ಠಾಣಾ ವ್ಯಾಪ್ತಿಯ ಕೆಯ್ಯೂರಿಗೆ ಆಗಮಿಸಿ ತನಿಖೆಗೆ ಮುಂದಾಗಿದ್ದಾರೆ. ಅಬೂಬಕ್ಕರ್ ಸಿದ್ದಿಕ್ ಪತ್ನಿಯ ಮನೆ ಸಂಪ್ಯ ಠಾಣಾ ವ್ಯಾಪ್ತಿಯ ಕೆಯ್ಯೂರಿನಲ್ಲಿರುವುದೆಂದು ಹೇಳಲಾಗುತ್ತಿದೆ.