

ಚಿಕ್ಕೋಡಿ: ಜನತಾ ಕರ್ಫ್ಯೂ ಇರುವ ಈ ಸಮಯದಲ್ಲಿ ಸಚಿವೆ ಶಶಿಕರ ಜೊಲ್ಲೆ ಅವರ ಪಿಎ ಹಾಗೂ ಮಹಿಳಾ ಅಧಿಕಾರಿಯೊಬ್ಬರು ನಡು ರಸ್ತೆಯಲ್ಲಿ ಜಗಳವಾಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಪುರಸಭೆ ಅಧಿಕಾರಿ ಅಪೂರ್ವ ಬಿದರಿ ಹಾಗೂ ಶಶಿಕಲಾ ಜೊಲ್ಲೆ ಅವರ ಪಿಎ ಸಂಜು ಅರಗೆ ಚಿಕ್ಕೋಡಿಯ ಪ್ರವಾಸಿ ಮಂದಿರದ ಎದುರಿನ ರಸ್ತೆಯಲ್ಲೆ ಟಾಕ್ ವಾರ್ ನಡೆಸಿದ್ದಾರೆ. ಮಾಸ್ಕ್ ಹಾಕದೆಯೇ ರಸ್ತೆಯಲ್ಲಿ ಓಡಾಡುತ್ತಿದ್ದವರನ್ನು ಅಪೂರ್ವ ಬಿದರಿ ಅವರು ಚೆಕ್ ಮಾಡುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ಸಂಜು ಅರಗೆ, ಅಪೂರ್ವ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ಇದಕ್ಕೂ ಮೊದಲು ಜೊಲ್ಲೆ ಒಡೆತನದ ಜ್ಯೋತಿ ಬಜಾರ್ನ್ನು ಅಪೂರ್ವ ಬಿದರಿ ಅವರು ಸೀಜ್ ಮಾಡಿಸಿದ್ದರು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಜಗಳ ಆಗುತ್ತಿರುವುದನ್ನು ಕಂಡ ಚಿಕ್ಕೋಡಿ ತಹಶೀಲ್ದಾರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೆ ಸೇರಿ ಇಬ್ಬರನ್ನೂ ಮನವೊಲಿಸಿದ್ದಾರೆ.