ಶರೀಫ ಶಿವಯೋಗಿಗಳ ಮಹಾರಥೋತ್ಸವ

24SGN(GR)02
Published on

ಶಿಗ್ಗಾಂವಿ: ಶಾಂತಿ-ಸೌಹಾರ್ದತೆಯ ತವರೂರು, ಭಾವೈಕ್ಯತೆಯ ನೆಲೆವೀಡು ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಶರೀಫ ಸಾಹೇಬ ಮತ್ತು ಗುರುಗೋವಿಂದ ಭಟ್ಟರ ಮಹಾ ರಥೋತ್ಸವ ಬುಧವಾರ ಸಡಗರ, ಸಂಭ್ರಮದಿಂದ ನೆರವೇರಿತು.

ರಥೋತ್ಸವಕ್ಕೂ ಮುನ್ನ ಸಂತ ಶರೀಫ-ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು, ಅವರ ಗದ್ದುಗೆಗೆ ಬೆಳಗ್ಗೆಯಿಂದಲೇ ಧಾರ್ವಿುಕ ವಿಧಿ-ವಿಧಾನಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ಕನ್ನಡ ಸಾಹಿತ್ಯವನ್ನು ಶ್ರೀಮಂತ ಹಾಗೂ ವೈವಿಧ್ಯಮಯವನ್ನಾಗಿ ಮಾಡಿದ ಸತ್ಪುರುಷ ಶರೀಫ-ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಎತ್ತಿನ ಬಂಡಿ ಮೂಲಕ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಶರೀಫ ಗಿರಿಯಲ್ಲಿ ಬೆಳಗ್ಗೆಯಿಂದ ನಡೆಯವ ಧಾರ್ವಿುಕ ವಿಧಿ, ವಿಧಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಭಕ್ತರು ಕಟ್ಟಿಕೊಂಡು ಬಂದ ರೊಟ್ಟಿ ಪಲ್ಲೆ, ಅನ್ನದ ಬುತ್ತಿಯನ್ನೇ ಪ್ರಸಾದ ರೂಪದಲ್ಲಿ ನೀಡಲಾಯಿತು. ಅನ್ನಪ್ರಸಾದ ಪಡೆಯಲು ನೂಕು ನುಗ್ಗಲು ಉಂಟಾಗಿತ್ತು.

ಮಹಾ ರಥೋತ್ಸವಕ್ಕೆ ಕುಂದಗೋಳ ಬಸವಯ್ಯಜ್ಜ ಮಠದ ಬಸಣ್ಣ ದೇವರು ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶಿವಯ್ಯ ಸ್ವಾಮಿಗಳು, ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ ಪಂಚಾಗ್ನಿಮಠ ಟ್ರಸ್ಟ್ ಅಧ್ಯಕ್ಷ ಎಸ್.ಜಿ. ದೇಶಪಾಂಡೆ, ಕಾರ್ಯದರ್ಶಿ ಜಿ.ವಿ. ದೇಶಪಾಂಡೆ, ವಿಶ್ವಸ್ಥ ಸಮಿತಿ ಧರ್ಮದರ್ಶಿಗಳಾದ ಎಸ್.ಎಲ್. ಪಾಟೀಲ, ಎಸ್.ಬಿ. ಅಂಗಡಿ, ಬಿ.ಆರ್. ಮಳಲಿ, ವಿ.ಎಂ. ಕಾಮರೆಡ್ಡಿ, ಐ.ಆರ್. ಪಾಟೀಲ, ಎಚ್.ಎಂ. ದೊಡ್ಡಮನಿ, ಎಂ.ಜಿ. ರಟಗೇರಿ, ಎಸ್.ಬಿ. ವಾಲ್ಮೀಕಿ, ವಿ.ಡಿ. ಪಾಟೀಲ, ಎಸ್.ಎಸ್. ನಾಗನಗೌಡ್ರ, ಎಂ.ಎಸ್. ಚಂದನಗೌಡ್ರ, ಯು.ಬಿ. ಶಿರೂರ, ದಲಬಂಜನ ದಂಪತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net