ಶರಸೇತು ಬಂಧನ ತಾಳಮದ್ದಳೆ

talamaddale
Published on

ಬೆಳ್ತಂಗಡಿ: ಶ್ರೀ ಮದವೂರ ವಿಘ್ನೇಶ ಕಲಾಸಂಘದ ಸದಸ್ಯರಿಂದ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಸಂಕಷ್ಟಿ ಪ್ರಯುಕ್ತ ಶರಸೇತು ಬಂಧನ ಎಂಬ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಕುಮಾರಿ ನಂದನ ಮಾಲೆಂಕಿ, ಕಾರ್ತಿಕ್ ಬಳ್ಳ ಮಂಜ, ರತನ್ ಗುಡಿಗಾರ್, ಆದಿತ್ಯ ಹೊಳ್ಳ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಬಾಸಮೆ ನಾರಾಯಣ ಭಟ್, ಶ್ರೀರಾಮಕೃಷ್ಣ ಭಟ್ ಬಳಂಜ, ಕೆ.ಆರ್. ಸುವರ್ಣ ಕುಮಾರಿ, ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವಟ್ನಾಯ, ಕೊಯ್ಯುರು ಅಶೋಕ ಭಾಂಗಿನ್ನಾಯ, ಡಾ.ಪ್ರಸನ್ನಕುಮಾರ್ ಐತಾಳ್ ಮೊದಲಾದವರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯರು ಕಲಾವಿದರನ್ನು ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net