22ರಿಂದ ಕಾಪು ದೇವಳದಲ್ಲಿ ಶರನ್ನವರಾತ್ರಿ ಮಹೋತ್ಸವ

pdb (2)
Published on

ಪಡುಬಿದ್ರಿ: ಕಾಪು ಶ್ರೀ ಹೊಸ ವಾರಿಗುಡಿ ದೇವಸ್ಥಾನದಲ್ಲಿ ಸೆ.22 ರಿಂದ ಅ.2ರ ವರೆಗೆ 11 ದಿನಗಳ ಪರ್ಯಂತ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವ ಮತ್ತು ವಿಜಯ ದಶಮಿಯವರೆಗೆ ಪ್ರತಿನಿತ್ಯ ನಡೆಯುವ ವಿಶೇಷ ಪೂಜೆ ವಿವರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಾಹಿತಿಯಿರುವ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು. ಈ ಬಾರಿಯ ನವರಾತ್ರಿ ಬಹಳ ವಿಶೇಷವಾಗಿದ್ದು, ನೂತನ ಗುಡಿಯಲ್ಲಿ ನೆಲೆಸಿರುವ ಅಮ್ಮನಿಗೆ ಪ್ರಥಮ ನವರಾತ್ರಿಯಾಗಿರುತ್ತದೆ. ನವರಾತ್ರಿಯಲ್ಲಿ ಪ್ರತಿದಿನ ಂಟಾನಾದ ಸೇವೆಯನ್ನು ವಾಡಲು ಭಕ್ತರಿಗೆ ಅವಕಾಶ ವಾಡಿಕೊಡಲಾಗಿದೆ. ದುರ್ಗಾ ನಮಸ್ಕಾರ, ಕಲ್ಪೋಕ್ತ ಪೂಜೆ ಹಾಗೂ ಇನ್ನಿತರ ಸೇವೆಯ ಅವಕಾಶ ಒದಗಿಸಲಾಗಿದೆ. ಸೆ. 30ರ ಮಂಗಳವಾರ ಮಹಾ ಚಂಡಿಕಾಯಾಗ, ಕೆಂಡಸೇವೆ, ಮಹಾ ಅನ್ನಪ್ರಸಾದ ನಡೆಯಲಿದೆ. ಚಂಡಿಕಾಯಾಗದ ಸಂಕಲ್ಪಕ್ಕೆ ರೂ.5000 ಪಾವತಿಸಿದ ಭಕ್ತರಿಗೆ ವಿಶೇಷ ಪ್ರಸಾದ ನೀಡುವ ವ್ಯವಸ್ಥೆ ವಾಡಲಾಗುತ್ತದೆ. ಸಂಕಲ್ಪದಲ್ಲಿ ಭಾಗಿಯಾಗುವವರು ಕೂಡಲೇ ದೇವಳದ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮತ್ತು ಅಭಿವದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದ್ದಾರೆ. ಪ್ರಧಾನ ಅರ್ಚಕ ಕಲ್ಯ ಶ್ರೀನಿವಾಸ ತಂತ್ರಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಾಧವ ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಕಟ್ಟಡ ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ ಮಕರ, ಶಿಲ್ಪಾ ಜಿ. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net