

ಕೋಟ: ಇಲ್ಲಿನ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ಶರನ್ನವರಾತ್ರಿ ಉತ್ಸವ ಅಕ್ಟೋಬರ್ 3ರಿಂದ ಆರಂಭಗೊಳ್ಳಲಿರುವ ಹಿನ್ನಲ್ಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ದೇಗುಲದಲ್ಲಿ ನಡೆಯಿತು.
ದೇಗುಲ ಆಡಳಿತ ಮಂಡಳಿ ಪೂರ್ವಾಧ್ಯಕ್ಷ ಆನಂದ್ ಸಿ.ಕುಂದರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ದೇವಸ್ಥಾನ ಆಡಳಿತ ವ್ಯವಸ್ಥಾಪಕ ಗಣೇಶ್ ಹೊಳ್ಳ, ಗ್ರಾಮದ ಹಿರಿಯ ಒಳಮಾಡು ಸೋಮ ಮರಕಾಲ, ಕೋಟ ಠಾಣೆ ಎಎಸ್‌ಐ ಜಯಪ್ರಕಾಶ್, ಸ್ಥಳೀಯರಾದ ಭದ್ರ ಪೂಜಾರಿ ಸಹಿತ ಮತ್ತಿತರರು ಉಪಸ್ಥಿತರಿದ್ದರು.