ಬಗ್ವಾಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಆರಂಭ

navarathri
ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಆರಂಭಗೊಂಡಿತು.
Published on

ಕುಂದಾಪುರ: ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಗುರುವಾರ ಆರಂಭಗೊಂಡಿತು.
ನವರಾತ್ರಿ ಸಂದರ್ಭದಲ್ಲಿ ಆಭರಣ ಸಹಿತ ಸರ್ವಾಂಕಾರ ಪೂಜೆ, ಅಷ್ಟೋತ್ತರ ಕುಂಕುಮಾರ್ಚನೆ, ಉಡಿ ತುಂಬುವುದು, ದುರ್ಗಾಸಹಸ್ರನಾಮ ಅರ್ಚನೆ, ನವರಾತ್ರಿ ಕಲ್ಪೋಕ್ತ ಪೂಜೆ, ನವರಾತ್ರಿ ವಿಶೇಷ ಪೂಜೆ, ಸರ್ವ ಸೇವೆ, ಪರಮಾನ್ನ ಸೇವೆ, ಚಂಡಿಕಾ ಪಾರಾಯಣ, ಪಂಚಾಮೃತ ಸೇವೆ, ಸಾಮೂಹಿಕ ಸಪ್ತಶತಿ ಪಾರಾಯಣ, ಪಂಚಾರತಿ ಸೇವೆ, ಚಂಡಿಕಾ ಹೋಮ ಮೊದಲಾದ ಸೇವೆಗಳು ನಡೆಯುತ್ತಿವೆ.

ಆಡಳಿತ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಗಣೇಶ ಮೆಂಡನ್, ಎನ್.ಡಿ.ಚಂದನ್, ಕೃಷ್ಣಮೂರ್ತಿ ನಾಯ್ಕ, ರಾಘವೇಂದ್ರ ಚಂದನ್ ಮುಂಬಯಿ, ಎಂ.ಎಂ.ಸುವರ್ಣ, ಎಂ.ಆರ್.ನಾಯ್ಕ, ಸಂತೋಷ್ ಶೆಟ್ಟಿ ಬಗ್ವಾಡಿ, ನಿವೃತ್ತ ಮುಖ್ಯಶಿಕ್ಷಕ ರಾಜೀವ ಶೆಟ್ಟಿ ಬಗ್ವಾಡಿ, ಆನಂದ ಕೆ.ನಾಯ್ಕ, ನಾಗೇಶ ಪಿ.ಕಾಂಚನ್, ದಿನೇಶ ಕಾಂಚನ್, ಪ್ರಭಾಕರ ಸೇನಾಪುರ, ಶ್ಯಾಮಲಾ ಜಿ.ಚಂದನ್, ರಾಜೀವ ಸೌರಭ, ಶೋಭಾ ಪುತ್ರನ್, ವಾಸು ಜಿ.ನಾಯ್ಕ, ಕ್ಷೇತ್ರದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು. ಶ್ರೀ ಮಹಿಷಾಸುರಮರ್ದಿನಿ ಭಜನಾ ತಂಡದ ಸದಸ್ಯರು, ಶ್ರೀ ಮಾತಾ ಭಜನಾ ಮಂಡಳಿ ಹಕ್ರೆಮಠ ಕೊಡೇರಿ ಭಜನಾ ತಂಡದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net