ಅಭಿವೃದ್ಧಿ ಇತಿಹಾಸವಾಗಲಿ ದಸರಾ

dasara
ಶಿರೂರು ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ಗುರುವಾರ ಬೈಂದೂರು ದಸರಾ-2024 ಶಿರೂರು ಗ್ರಾಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಉದ್ಘಾಟಿಸಿದರು.
Published on

ಬೈಂದೂರು: ಕಲೆ, ಸಾಹಿತ್ಯ ಸಾಂಸ್ಕೃತಿಕ ಸೇರಿದಂತೆ ಬೈಂದೂರು ತಾಲೂಕು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆಯಿದೆ. ಬೈಂದೂರು ದಸರಾ ಮುಂದಿನ ದಿನದಲ್ಲಿ ನಮ್ಮ ತಾಲೂಕಿನ ಅಭಿವೃದ್ಧಿ ಇತಿಹಾಸವಾಗಲಿದೆ ಎಂದು ಬೈಂದೂರು ದಸರಾ ಉತ್ಸವ ಸಮಿತಿ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

ಶಿರೂರು ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ಗುರುವಾರ ಸಂಜೆ ಅ.3ರಿಂದ 12ರ ವರೆಗೆ ಸಾರ್ವಜನಿಕ ಶಾರದೋತ್ಸವ ಸಮಿತಿ ವತಿಯಿಂದ ಬೈಂದೂರಿನ ಮಹತೊಭಾರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಶಿರೂರು ಘಟಕ ಸಹಯೋಗದಲ್ಲಿ ನಡೆಯುವ ಬೈಂದೂರು ದಸರಾ-2024ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿರೂರು ಗ್ರಾಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಉದ್ಘಾಟಿಸಿದರು. ಶಿರೂರಿನ ಹಿರಿಯ ವೈದ್ಯ ಡಾ.ಕೆ.ಪಿ.ನಂಬಿಯಾರ್, ಬೈಂದೂರು ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಗಿರೀಶ್ ಬೈಂದೂರು, ಬೈಂದೂರು ದಸರಾ ಉತ್ಸವ ಸಮಿತಿ ಉಪಾಧ್ಯಕ್ಷ ಕೃಷ್ಣ ದೇವಾಡಿಗ, ಖಜಾಂಚಿ ಉಮೇಶ ದೇವಾಡಿಗ ಬಂಕೇಶ್ವರ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net