

ಕವಲೂರು: ಗ್ರಾಮದ ಶರಣಬಸವೇಶ್ವರ 78ನೇ ವರ್ಷದ ಭಜನಾ ಮಂಗಲ ಕಾರ್ಯಕ್ರಮ ಅಂಗವಾಗಿ ಸೋಮವಾರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಕಂರ್ಯಗಳು ಜರುಗಿದವು.
ಇದನ್ನೂ ಓದಿ: ಮಾರುತಿ ದೇಗುಲದಲ್ಲಿ ಭಜನಾ ಸಪ್ತಾಹ ಸಂಪನ್ನ
ಅಲಂಕೃತಗೊಂಡ ಅಡ್ಡಪಲ್ಲಕ್ಕಿಯಲ್ಲಿ ಶರಣಬಸವೇಶ್ವರ ಮೂರ್ತಿ ಇಟ್ಟು ಮೆರವಣಿಗೆ ಮಾಡಲಾಯಿತು. ಮಹಿಳೆಯರ ಕಳಸ, ಕುಂಭ, ಹಾಗೂ ವಿವಿಧ ಗ್ರಾಮದ ಭಜನಾ ಮೇಳಗಳೊಂದಿಗೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಪ್ರಮುಖರಾದ ಮುತ್ತಯ್ಯ ಲಿಂಬಿಕಾಯಿಮಠ, ಸೋಮಯ್ಯ ಲಿಂಬಿಕಾಯಿಮಠ, ರಮೇಶ, ವಿರುಪಾಕ್ಷಗೌಡ, ಚಂದ್ರಗೌಡ, ಲಕ್ಷ್ಮಣ, ಸುರೇಶ,
ಅಲ್ಲಸಾಬ, ಶೇಖಪ್ಪ, ಶರಣಪ್ಪ, ಬಸಪ್ಪ, ಮುತ್ತಪ್ಪ, ಯಂಕಣ್ಣ, ಪಟ್ಟಣಶೆಟ್ಟಿ, ಹನುಮಪ್ಪ, ಶರಣಪ್ಪ, ಶಿವಪ್ಪ, ಸಂಗಪ್ಪ, ಸೂಗಿರಪ್ಪ, ಹರೀಶ, ಪಕೀರಶೆಟ್ಟಿ, ಶೇಖಪ್ಪ, ಮಾರುತಿ, ಲಿಂಗರಾಜ, ವಿಜಯಕುಮಾರ, ನಾಗಪ್ಪ, ಕರಿಯಪ್ಪ, ಈರಪ್ಪ , ಆಶೋಕ, ಮಲ್ಲಪ್ಪ, ಗವಿಸಿದ್ದಪ್ಪ, ಹನುಮಪ್ಪ, ಯಲ್ಲಪ್ಪ ಇತರರಿದ್ದರು.