ಸತಿಪತಿಗಳ ಆತ್ಮಸಾಂಗತ್ಯದ ಭಕ್ತಿ ಶಿವನಿಗೆ ಹಿತ

Saharana_Sahitya
Published on

ತುಮಕೂರು: ಲಿಂಗೈಕ್ಯ ಶರಣ ಸಿದ್ಧಮಲ್ಲಯ್ಯ ಮತ್ತು ಲಿಂಗೈಕ್ಯ ಶರಣೆ ಸುವರ್ಣಮ್ಮನವರ ಸ್ಮರಣಾರ್ಥ ದತ್ತಿ ಉಪನ್ಯಾಸವನ್ನು ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲೂಕು ಟಕದ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾ ಕದಳಿ ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯೆ ಲೋಕೇಶ್ವರಿಪ್ರಭು ಅವರು ಶರಣರಲ್ಲಿ ಸಾಂಸಾರಿಕ ಬಾಂಧವ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಶರಣಧರ್ಮವು ಸತಿಪತಿ ಧರ್ಮವೇ ಆಗಿದೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪು$್ಪದು ಶಿವಂಗೆ. ಮಾನಸಿಕ, ಆಧ್ಯಾತ್ಮಿಕವಾಗಿ ಒಂದಾದ ಸತಿಪತಿಗಳ ಆತ್ಮಸಾಂಗತ್ಯದ ಭಕ್ತಿ ಮಂಗಳಮಯವಾದ ಶಿವನಿಗೆ ಹಿತ ಎಂದು ಬಣ್ಣಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್​ ಎಂ.ಜಿ.ಸಿದ್ದರಾಮಯ್ಯ ಅಧ್ಯಕ್ಷತೆವಹಿಸಿದ್ದರು. ಬೆಂಗಳೂರಿನ ನಿವೃತ್ತ ಪ್ರಾಂಶುಪಾಲ ಡಾ. ವೈ.ತುಳಜಪ್ಪ ಎರೇಸೀಮೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಬಿ.ರಾಜಶೇಖರಯ್ಯ, ಟಿ. ಎಸ್​. ಮಹದೇವಯ್ಯ, ಕಾಟೇನಹಳ್ಳಿ ಚಂದ್ರಣ್ಣ, ಮಾವುಕೆರೆ ಸೋಮಶೇಖರ್​, ಈಚನೂರು ರಾಜಶೇಖರ್​. ಚಿಕ್ಕಬೆಳ್ಳಾವಿ ಶಿವಕುಮಾರ್​ ನಿವೃತ್ತ ಪ್ರಾಂಶುಪಾಲ ಎಸ್​ ರಾಜಣ್ಣ ಉಪಸ್ಥಿತರಿದ್ದರು.

ದತ್ತಿ ದಾನಿಗಳಾದ ಶಿವಕುಮಾರ್​ ಸ್ವಾಗತಿಸಿದರು. ಎಸ್​.ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಅರ್ಪಣಾ ಮಲ್ಲಿಕಾರ್ಜುನ್​ ವಂದಿಸಿದರು.

ಪ್ರೇಮ ಕುಮಾರಸ್ವಾಮಿ, ಭವಾನಮ್ಮ ಗುರುಮಲ್ಲಪ್ಪ, ಮಿಮಿಕ್ರಿ ಈಶ್ವರಯ್ಯ ಮತ್ತಿತರರು ವಚನ ಗಾಯನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net