ಶರಣಬಸವ ವಿವಿಯಲ್ಲಿ  ಎಂ.ಎಸ್‌ಸಿ ಡಾಟಾ ಸೈನ್ಸ್ ಎಂ.ಎಸ್‌ಸಿ ಯೋಗ ಕೋರ್ಸ್ ಆರಂಭ

IMG-20230831-WA0004
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿನ ಪ್ರತಿಷ್ಠಿತ ಶರಬಸವ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ೨೦೨೩-೨೪ ನೇ  ಶೈಕ್ಷಣಿಕ ಸಾಲಿನಿಂದ ಎಂ.ಎಸ್‌ಸಿ ಡಾಟಾ ಸೈನ್ಸ್ ಮತ್ತು ಎಂ.ಎಸ್‌ಸಿ ಯೋಗ  ಎಂಬ ಎರಡು ಹೊಸ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಈ  ಕೋರ್ಸ್  ಆರಂಭಿಸಿದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಭಾಜನವಾಗಿದೆ.
ಬಿ.ಟೆಕ್ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಡೇಟಾ ಸೈನ್ಸಸ್) ಮತ್ತು ಎರಡು ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು ಶರಣಬಸವ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿದೆ ಎಂದು ಕುಲ ಸಚಿವ ಡಾ.ಅನಿಲಕುಮಾರ ಬಿಡವೆ ತಿಳಿಸಿದ್ದಾರೆ. ಎರಡು ಕೋರ್ಸ್ಗಳಿಗೆ  ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್ ಈಗಾಗಲೇ ಬಿ.ಟೆಕ್ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಡೇಟಾ ಸೈನ್ಸಸ್) ಅನುಮೋದನೆ ನೀಡಿದ್ದರಿಂ ೨೦೨೨-೨೩ ಶೈಕ್ಷಣಿಕ  ಸಾಲಿನಲ್ಲಿ  ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.
ಡೇಟಾ ಸೈನ್ಸಸ್‌ನಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್  ಸ್ನಾತಕೋತ್ತರ ಕೋರ್ಸ್ ಎರಡು ವರ್ಷದ್ದಾಗಿವೆ. ದೇಶ ವಿದೇಶದಲ್ಲಿ ಬೇಡಿಕೆ ಇರುವ ಕೋರ್ಸ್. ಅಲ್ಲದೆ ಉದ್ಯೋಗಾವಕಾಶಗಳು ಹೆಚ್ಚಿಗೆ ಸೃಷ್ಟಿಸಲಿದೆ,
ಎಂ.ಎಸ್‌ಸಿ ಯೋಗ ಪೂರ್ಣ ಸಮಯದ ನಿಯಮಿತ ಕೋರ್ಸ್ ಆಗಿದ್ದು ವಿದ್ಯಾರ್ಥಿಗಳಿಗೆ ಸಿದ್ಧಾಂತ, ಪ್ರಾಯೋಗಿಕ ಮತ್ತು ಕ್ಷೇತ್ರ ಕಾರ್ಯಗಳ ಪರಿಪೂರ್ಣ ಶಿಕ್ಷಣವನ್ನು ನಾಲ್ಕು ಸೆಮಿಸ್ಟರ್‌ಗಳಲ್ಲಿ ನೀಡಲಾಗುತ್ತದೆ. ಪೂರ್ಣ ಪ್ರಮಾಣದ ಆರೋಗ್ಯ ಕೇಂದ್ರದಲ್ಲಿ ಯೋಗ ಪ್ರಾಯೋಗಿಕ ತರಬೇತಿ ವಿದ್ಯಾರ್ಥಿಗಳಿಗೆ ನೀಡಲಾಗುವುದು. ನುರಿತÀ ಅಧ್ಯಾಪಕರು ಮತ್ತು ತರಬೇತಿ ಪಡೆದ ಆಯುರ್ವೇದ ವೈದ್ಯರು, ಚಿಕಿತ್ಸಕರು ಮತ್ತು ಯೋಗ ಶಿಕ್ಷಕರು ಪ್ರಾಯೋಗಿಕ ಮತ್ತು ಸಿದ್ಧಾಂತ ತರಗತಿಗಳನ್ನು ನಡೆಸುವರು ಎಂದು ತಿಳಿಸಿದ್ದಾರೆ. ಇದಕ್ಕೂ ಉದ್ಯೋಗಾವಕಾಶ ಬಾಗಿಲು ತೆರೆದುಕೊಳ್ಳಲಿದೆ  ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಎರಡು ಹೊಸ ಕೋರ್ಸ್ಗಳಿಗೆ ಅನುಮತಿ ದೊರೆತಿರುವುದಕ್ಕೆ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ  ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್.ಅಪ್ಪ ಅವರು ವಿವಿಯ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಾರ್ಯಕ್ಕೆ  ಅಭಿನಂದಿಸಿದ್ದಾರೆ.
ಉಪಕುಲಪತಿ ಡಾ.ನಿರಂಜನ್ ನಿಷ್ಠಿ ಮತ್ತು ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ  ಬಸವರಾಜ ದೇಶಮುಖ, ವಿವಿ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಅವರು ಈ  ಎರಡು ಕೋರ್ಸ್ಗಳಿಗೆ ಅನುಮೋದನೆ ಪಡೆಯಲು ಶ್ರಮಿಸಿದ  ಎಲ್ಲ ಸಿಬ್ಬಂದಿ ಕಾರ್ಯ ಶ್ಲಾಸಿದರು.  ಈ ನಿಟ್ಟಿನಲ್ಲಿ ನಿರಂತವಾಗಿ ಕಾರ್ಯ ಮಾಡಿದ ಹಣಕಾಸು ಅಧಿಕಾರಿ ಪ್ರೊ. ಕಿರಣ ಮಾಕಾ ಅವರ ಅವಿರತ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net