ಶರಣ ಸಾಹಿತ್ಯ ಪರಿಷತ್‌ನಿಂದ ವಚನ ದಾಸೋಹ

SHRANA
Published on

ಕೊಟ್ಟೂರು: 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಕೊಟ್ಟೂರು ಥಿಯಾಸಫಿಕಲ್ ಲಾಡ್ಜ್ ಅಧ್ಯಕ್ಷ ಎ.ಚಂದ್ರಣ್ಣ ಹೇಳಿದರು.

ಸಂಸ್ಥಾಪನಾ ದಿನಾಚರಣೆ

ಪಟ್ಟಣದ ಶ್ರೀ ಕೋಲಶಾಂತೇಶ್ವರ ಪ್ರೌಢ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮಂಗಳವಾರ ಆಯೋಜಿಸಿದ್ದ ಸುತ್ತೂರು ಶ್ರೀಗಳ ಜನ್ಮದಿನ, ಪರಿಷತ್ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮದಲ್ಲಿ ‘ಶರಣ ಸಾಹಿತ್ಯ ಒಂದು ಚಿಂತನೆ’ ಬಗ್ಗೆ ಮಾತನಾಡಿದರು. ಶರಣರ ವಚನಗಳ ವಿಚಾರಧಾರೆಗಳನ್ನು ಶರಣ ಸಾಹಿತ್ಯ ಪರಿಷತ್ ಜನತೆಗೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಶರಣ ಅಂಗಡಿ ಪಂಪಾಪತಿ ಮಾತನಾಡಿ, ಶರಣರ ಪ್ರತಿಯೊಂದು ವಚನಗಳು ತಮ್ಮ ಅನುಭವಗಳಿಂದ ರಚನೆಯಾಗಿವೆ. ವಚನಗಳ ಸಾರ ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಮುಖ್ಯ ಶಿಕ್ಷಕ ಎ.ಎಸ್.ವೀರೇಶ, ಎನ್.ಹಂಪಣ್ಣ, ಗಡ್ಡಿ ಮಹೇಶ, ಹನುಮಂತಪ್ಪ ಇತರರಿದ್ದರು. ಜಿ.ಸಿದ್ದಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಂ.ನಳಿನಿ ಸ್ವಾಗತಿಸಿದರು. ಹೊಂಬಾಳೆ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net