ಪೌರಕಾರ್ಮಿಕರು ಪಟ್ಟಣದ ಜೀವನಾಡಿ ಇದ್ದಂತೆ

26 ank 1
Published on

ಅಂಕೋಲಾ: ಪೌರಕಾರ್ಮಿಕರು ಪಟ್ಟಣದ ಜೀವನಾಡಿಗಳಾಗಿದ್ದಾರೆ. ಅಂತಹ ಸೇವಾ ನಿರತ ಪೌರಕಾರ್ಮಿಕರ ದಿನವನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಹೇಳಿದರು.

ಪಟ್ಟಣದ ಸಮಾಜ ಮಂದಿರದಲ್ಲಿ ಪುರಸಭೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪುರಸಭೆಯ ಕಾಯಂ ಪೌರಕಾರ್ಮಿಕರಿಗೆ ಸರ್ಕಾರದಿಂದ ತಲಾ 7 ಸಾವಿರ ರೂ. ಪ್ರೋತ್ಸಾಹಧನ ನೀಡುವ ಮೂಲಕ ಒಟ್ಟು 32 ಜನರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಇಂಜಿನಿಯರ್ ಸೇಲ್ಜಾ ನಾಯ್ಕ, ಸದಸ್ಯರಾದ ಶಾಂತಲಾ ನಾಡಕರ್ಣಿ, ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ, ರೇಖಾ ಗಾಂವಕರ, ಪ್ರಕಾಶ ಗೌಡ, ಮಂಜುನಾಥ ನಾಯ್ಕ, ನಾಗರಾಜ ಐಗಳ, ಅಶೋಕ ಶೆಡಗೇರಿ, ಜಯಾ ನಾಯ್ಕ ಮಾತನಾಡಿದರು. ಸದಸ್ಯರಾದ ಕಾರ್ತಿಕ ನಾಯ್ಕ, ಮಂಗೇಶ ಆಗೇರ, ನಿರ್ಮಲಾ ಹುಲಸ್ವಾರ, ತಾರಾ ನಾಯ್ಕ, ಹೇಮಾ ಆಗೇರ, ಶೀಲಾ ಶೆಟ್ಟಿ, ಕರುಣಾ ಮಹಾಲೆ, ಸುರಕ್ಷಾ ಭೋವಿ ಉಪಸ್ಥಿತರಿದ್ದರು.

ಪೌರಕಾರ್ಮಿಕ ವಿನೋದ ಹುಲಸ್ವಾರ ಪ್ರಾರ್ಥಿಸಿದರು. ಸಮುದಾಯ ಸಂಘಟನಾಧಿಕಾರಿ ಡಿ.ಎಲ್. ರಾಠೋಡ, ಆರೋಗ್ಯ ನಿರೀಕ್ಷಕ ವಿಷ್ಣು ಗೌಡ, ವ್ಯವಸ್ಥಾಪಕಿ ಸುರೇಖಾ ಪಾರ್ಸಿಕರ ನಿರ್ವಹಿಸಿದರು. ಬೀರಣ್ಣ ನಾಯಕ, ರಮೇಶ ನಾಯ್ಕ, ಮಹೇಶ ಶೇಟ್, ನಮ್ರತಾ ಮೊದಲಾದವರು ಸಹಕರಿಸಿದರು. ಬಳಿಕ ಪೌರ ಕಾರ್ಮಿಕರಿಂದ ವಿವಿಧ ಮನರಂಜನೆ ಕಾರ್ಯಕ್ರಮ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net