ಶಾರದೆ ಸಂಸ್ಕಾರ ನೀಡುವ ಮಾತೆ

hbr (3)
Published on

ಹೆಬ್ರಿ: ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಶಾರದಾ ಪೂಜೆ ನಡೆಯಿತು. ಪ್ರೌಢಶಾಲಾ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆ ನೆರವೇರಿಸಿ ಮಾತನಾಡಿ, ಶಾರದಾ ದೇವಿ ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿಗೆ ಕಾರಣೀಕರ್ತಳು. ಕೈಗಳಲ್ಲಿ ವೀಣೆ, ಪುಸ್ತಕ ಧರಿಸಿದ ಶಾರದಾ ದೇವಿಯು ವಾನಸಿಕ ಸಂತೋಷ ನೀಡಿ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವ ವಾತೆಯಾಗಿದ್ದಾಳೆ. ಸರ್ವರನ್ನು ಉದ್ಧಾರ ವಾಡುವ ಮೂಲಕ ಸವಾಜದ ಆದರ್ಶ ವ್ಯಕ್ತಿಯಾಗುವಂತೆ ಅನುಗ್ರಹಿಸುತ್ತಾಳೆ ಎಂದರು. ಬಚ್ಚಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಮುಳ್ಳುಗುಡ್ಡೆ ಬನಶಂಕರಿ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಟ್ರಸ್ಟಿ ಸುಧೀರ್ ನಾಯಕ್, ವಸತಿ ನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ, ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಮೇಲ್ವಿಚಾರಕ ರಾವೇಂದ್ರ, ವಸತಿ ನಿಲಯ ಮುಖ್ಯಸ್ಥ ನಿತಿನ್ ಶೆಟ್ಟಿ, ವಸತಿ ನಿಲಯ ಮೇಲ್ವಿಚಾರಕರಾದ ಭರತ್, ಶಿವಕುವಾರ್, ತಿಮ್ಮಪ್ಪ, ಅಭಿಜಿತ್, ಶ್ರವಣ್, ವಿರೂಪಾಕ್ಷ, ಜಂಬಯ್ಯ, ರವ್ಯಾ, ಅಂಜಲಿ, ಪೃಥ್ವಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net