ಹಿರಿಯಡ್ಕದಲ್ಲಿ ಎನ್ನೆಸ್ಸೆಸ್ ವಾರ್ಷಿಕ ಶಿಬಿರ ಸಮಾರೋಪ

hbr (2)
Published on

ಹೆಬ್ರಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಪದವಿ ಪೂರ್ವ ವಿಭಾಗದ ಎನ್ನೆಸ್ಸೆಸ್ ವಾರ್ಷಿಕ ಶಿಬಿರ ಸಮಾರೋಪ ಕಾರ್ಯಕ್ರಮ ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕೃಷಿ ಅರ್ಥಶಾಸ್ತ್ರಜ್ಞ ಡಾ.ಎನ್.ಎಸ್.ಶೆಟ್ಟಿ ಮಾತನಾಡಿ, ಎನ್ನೆಸ್ಸೆಸ್ ಶಿಬಿರವು ಪರಿಸರದ ಸ್ವಚ್ಛತೆ ಮತ್ತು ಕಾಳಜಿ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತದೆ. ಪರಿಸರ ಅಭಿವೃದ್ಧಿಯೊಂದಿಗೆ ಕಾಪಾಡಿಕೊಂಡು ಮುಂದಿನ ಜನಾಂಗಕ್ಕೆ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಯುವಕರು ಸದೃಢರಾದರೆ ಭಾರತ ಸದೃಢವಾಗುತ್ತದೆ ಎಂದರು.

ಪ್ರಾಂಶುಪಾಲ ಮಂಜುನಾಥ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಲಕ್ಷ್ಮೀನಾರಾಯಣ ಪ್ರಭು, ಹರೀಶ್ ಸಾಲಿಯಾನ್, ನಿತೀಶ್ ಶೆಟ್ಟಿ, ನಾಗರಾಜೇಂದ್ರ ಎಂ.ಆರ್,. ಬಿ.ಎಲ್.ವಿಶ್ವಾಸ್, ವಿಜಯ ಶೆಟ್ಟಿ, ರಮೇಶ್ ನಾಯ್ಕ, ಜಯಶ್ರೀ, ಸತೀಶ್, ವಿದ್ಯಾ, ಮಹೇಶ, ರವೀಂದ್ರ ಪ್ರಭು, ಮೋಹನ್ ಕಡಬ, ಅಮೋಘ, ಅದಿತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net