ಅಮೃತಭಾರತಿಯಲ್ಲಿ ಶಾರದಾ ಪೂಜೆ

sharada
ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಶಾರದಾ ಪೂಜೆ ನಡೆಯಿತು
Published on

ಹೆಬ್ರಿ: ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಶಾರದಾ ಪೂಜೆ ನಡೆಯಿತು. ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆ ಸಲ್ಲಿಸಿದರು. ಶ್ವೇತಾ ತಂತ್ರಿ, ಐಸಿರಿ ಎಂ., ನಿತ್ಯಾನಂದ ಭಟ್, ಪ್ರದೀಪ್ ಉಪಾಧ್ಯಾಯ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಚಾರ ಮಹಿಷಮರ್ದಿನಿ ಭಜನಾ ಮಂಡಳಿಯಿಂದ ಕುಣಿತ ಭಜನೆ ಮತ್ತು ವಸತಿ ನಿಲಯದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ವಸತಿ ನಿಲಯದ ಮುಖ್ಯಸ್ಥ ರವೀಂದ್ರ, ವಸತಿ ನಿಲಯದ ಮೇಲ್ವಿಚಾರಕರಾದ ಶಿವಕುಮಾರ್, ಚಿತ್ತರಂಜನ್, ಮಂಜುನಾಥ, ಪೃಥ್ವಿ, ಪುಷ್ಪಲತಾ, ರಮ್ಯಾ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net