ಗೋಳಿಯಂಗಡಿ ದೇವಳದಲ್ಲಿ ವಿಶೇಷಾಲಂಕಾರ ಪೂಜೆ

goliyangadi
ಗೋಳಿಯಂಗಡಿ ಶ್ರೀಅನ್ನಪೂರ್ಣೇಶ್ವರಿ ಸದಾಶಿವ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 30ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವರಿಗೆ ವಿಶೇಷಾಲಂಕಾರ ಪೂಜೆ ನಡೆಯಿತು.
Published on

ಗೋಳಿಯಂಗಡಿ: ಗೋಳಿಯಂಗಡಿ ಶ್ರೀ ಅನ್ನಪೂರ್ಣೇಶ್ವರಿ ಸದಾಶಿವ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 30ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಪ್ರತಿದಿನ ರಾತ್ರಿ 7.30ರಿಂದ 9ರ ತನಕ ಭಜನಾ ಕಾರ್ಯಕ್ರಮ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯುತ್ತಿದೆ. ಅ.11ರಂದು ಸಂಜೆ 6ರಿಂದ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ, 12ರಂದು ಬೆಳಗ್ಗೆ ದುರ್ಗಾಹೋಮ, 10ರಿಂದ ಕುಣಿತ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net