ಮೂಲ್ಕಿಯಲ್ಲಿ ಶಾರದಾ ಮಾತೆ ಶೋಭಾಯಾತ್ರೆ

dasara
Published on

ಮೂಲ್ಕಿ: ಹಿಂದು ಯುವ ಸೇನೆ ಹಾಗೂ ಮಹಿಳಾ ಘಟಕ ವತಿಯಿಂದ 26ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಶೋಭಾಯಾತ್ರೆ ವಿಜೃಂಭಣೆಯಿಂದ ಶುಕ್ರವಾರ ರಾತ್ರಿ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಹಾಗೂ ಮಧ್ಯಾಹ್ನ ಅರ್ಚಕ ಪ್ರಶಾಂತ್ ಭಟ್ ಪ್ರಧಾನ ಪೌರೋಹಿತ್ಯದಲ್ಲಿ ಮಹಾಪೂಜೆ ನಡೆಯಿತು.

ಸಂಜೆ ಶ್ರೀ ಶಾರದಾ ಮಾತೆಯ ವಿಸರ್ಜನಾ ಪೂಜೆ ನಡೆದು ಆಕರ್ಷಕ ಶೋಭಾಯಾತ್ರೆಯು ವಿವಿಧ ಬಿರುದಾವಳಿಗಳೊಂದಿಗೆ ಶಿವಾಜಿ ಮಂಟಪದಿಂದ ಹೊರಟು, ಬಪ್ಪನಾಡು ದೇವಸ್ಥಾನ, ಪಂಚಮಹಲ್ ರಸ್ತೆ, ಬಿಲ್ಲವ ಸಮಾಜ ಸೇವಾ ಸಂಘ, ಮೂಲ್ಕಿ ಬಸ್ ನಿಲ್ದಾಣದ ಮೂಲಕ ಕೊಪ್ಪಳ ಕೆರೆಯಲ್ಲಿ ಶಾರದಾ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಶೈಲೇಶ್ ಕೆಎಸ್‌ರಾವ್ ನಗರ, ಸುಭಾಶ್ ಶೆಟ್ಟಿ, ಮೂಲ್ಕಿ ಹಿಂದು ಯುವ ಸೇನೆ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಪಾಧ್ಯಕ್ಷ ಗಿರೀಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ನಿತಿನ್ ದೇವಾಡಿಗ, ಕೋಶಾಧಿಕಾರಿ ಅಶ್ವತ್ ಕೊಲಕಾಡಿ, ಶಂಕರ್ ಪಡಂಗ, ಕಮಲಾಕ್ಷ ಬಡಗಿತ್ಲು, ಮಹಿಳಾ ಮಂಡಳಿ ಉಪಾಧ್ಯಕ್ಷೆ ಸುಲತ, ಸದಸ್ಯೆ ಭಾನುಮತಿ ಶೆಟ್ಟಿ ಕಕ್ವಗುತ್ತು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net