ಶಾರದೋತ್ಸವ ಒಗ್ಗಟ್ಟು ಪ್ರದರ್ಶಿಸುವ ಸಂಭ್ರಮ

kota (1)
Published on

ಕೋಟ: ಹಬ್ಬಹರಿದಿನಗಳು ಜನರ ಧಾರ್ಮಿಕ ಭಾವನೆ ಗಟ್ಟಿಗೊಳಿಸುವ ಆಚರಣೆಯಾಗಿದೆ. ಅದರಂತೆ ಶಾರದೋತ್ಸವ ಕಾರ್ಯಕ್ರಮ ಜನಮಾನಸದಲ್ಲಿ ನೆಲೆಯೂರಿ ಒಗ್ಗಟ್ಟು ಪ್ರದರ್ಶಿಸುವ ಸಂಭ್ರಮವಾಗಲಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಹೇಳಿದರು. ಗುರುವಾರ ಸಾಲಿಗ್ರಾಮ ದೇಗುಲದಲ್ಲಿ ಪಾಂಡೇಶ್ವರ ಶಾರದೋತ್ಸವ ಸಮಿತಿ ವತಿಯಿಂದ ನಡೆಸಲ್ಪಡುವ 32ನೇ ವರ್ಷದ ಶಾರದೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ದೇಗುಲದ ಮ್ಯಾನೇಜರ್ ಗಣೇಶ್ ಭಟ್ಟ ಪಾಂಡೇಶ್ವರ, ಕೂಟಮಹಾಜಗತ್ತು ಅಂಗ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಹೊಳ್ಳ, ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್, ಸಮಿತಿ ಉಪಾಧ್ಯಕ್ಷ ದೇವದಾಸ್ ಸಾಲ್ಯಾನ್, ಪಿ.ಬಾಲಕೃಷ್ಣ ಪೂಜಾರಿ, ನಾರಾಯಣ ವಿ.ಆಚಾರ್, ಚಂದ್ರಶೇಖರ ಮಯ್ಯ, ಲೀಲಾವತಿ ಗಂಗಾಧರ್, ಕೋಶಾಧಿಕಾರಿ ವಿಶ್ವನಾಥ ಆಚಾರ್, ಜತೆ ಕೋಶಾಧಿಕಾರಿ ಉಷಾ ಗಣೇಶ ಪೂಜಾರಿ, ಕಲಾ ಕಾರ್ಯದರ್ಶಿ ಶ್ರೀಶ ಆಚಾರ್, ನಿತೇಶ್ ಪಾಂಡೇಶ್ವರ, ಅಭಿಜಿತ್ ಪಾಂಡೇಶ್ವರ, ಆಶಾ ವಸಂತ್ ಪೂಜಾರಿ, ಸುರೇಶ್ ಪೂಜಾರಿ, ಮನೋಜ್ ಪೂಜಾರಿ, ರವಿ ಪೂಜಾರಿ ಮಕ್ಕಿ, ಆನಂದ ಆಚಾರ್, ಗಣಪಯ್ಯ ಆಚಾರ್, ರಾಜು ಪಾಂಡೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net