

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಶಾಂತಿನಿಕೇತನ ಸಹಕಾರಿಗೆ ಬರಲು ಯೋಗ್ಯವಾದ ರಸ್ತೆ ಇಲ್ಲ, ಗ್ರಾಮೀಣ ಭಾಗದಲ್ಲಿ ಇಂತಹ ಕುಗ್ರಾಮಲ್ಲಿ ಸಹಕಾರಿ ಸಂವನ್ನು ಸ್ಥಾಪಿಸಿ ಆರ್ಥಿಕ ವ್ಯವಹಾರ ನಡೆಸಿ ಶೇ. 20ರಷ್ಟು ಡಿವಿಡೆಂಡ್ ನೀಡಿರುವುದು ಅದ್ಭುತ ಸಾಧನೆ. ಇಲ್ಲಿಯ ಯುವಕರ ಧೈರ್ಯ ಸಾಧನೆಗೆ ಮೆಚ್ಚಬೇಕು. ಪರಿಸರದ ಜಾಗೃತಿಗಾಗಿ, ಕೈ ಚೀಲ ಬಳಸಿ ಶಾಂತಿನಿಕೇತನ ಸಹಕಾರಿಯ ರಾಜ್ಯದ ವಿವಿಧ ಸಹಕಾರಿಗಳಿಗೆ ಮಾದರಿ ಎಂದು ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಹೇಳಿದರು.
ಶಾಂತಿನಿಕೇತನ ಸಭಾಂಗಣದಲ್ಲಿ ಭಾನುವಾರ ನಡೆದ ಶಾಂತಿನಿಕೇತನ ಸೌಹಾರ್ದ ಸಹಕಾರಿಯ ವಾರ್ಷಿಕ ಸಾವಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಅಧ್ಯಕ್ಷ ರಾಜೇಶ್ ಮಾತನಾಡಿ, ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಾಗ ಸಹಕಾರ್ಯ ಬೆಳವಣಿಗೆ ಆಗುತ್ತದೆ. ಪ್ರತಿಯೊಬ್ಬ ಜೀವನದಲ್ಲಿ ಆರ್ಥಿಕ ಶಿಸ್ತು ಬಹಳ ಮಹತ್ವದಾಗಿದೆ. ಐದು ವರ್ಷದಲ್ಲಿ ಆಡಳಿತ ಮಂಡಳಿಯವರು ನಿಸ್ವಾರ್ಥ ಸೇವೆ ಸಲ್ಲಿಸಿದರ ಪರಿಣಾಮವಾಗಿ ಸಹಕಾರಿ ಬೆಳದಿದೆ ಎಂದರು.
ಸಹಕಾರಿ ಉತ್ತಮ ಸದಸ್ಯರಾಗಿ ಸಂತೋಷ್ ಆಚಾರ್ಯ, ಲಕ್ಕಿ ಮೆಂಬರ್ ಆಗಿ ಸಂತೋಷ್ ಬಿ.ಶೆಟ್ಟಿ ಆಯ್ಕೆಯಾದರು.
ಪರಿಸರದ ಕಾಳಜಿಯಿಂದ ಲಾಭಾಂಶದ ಒಂದು ಭಾಗವನ್ನು ವಿನಿಯೋಗಿಸಿ ಸದಸ್ಯರಿಗೆ ಬಟ್ಟೆ ಕೈ ಚೀಲ ನೀಡಲಾಯಿತು. ಇದನ್ನು ಪೋಷಕ ಸದಸ್ಯ ಮುದ್ದೂರು ಬಾಲಕೃಷ್ಣ ವೈದ್ಯ ನೆರವೇರಿಸಿದರು. ವಿಶೇಷವಾಗಿ ನಿರ್ದೇಶಕರ ಹೆತ್ತವರನ್ನು ಗೌರವಿಸಲಾಯಿತು. ಸಹಕಾರಿಯ ಪೋಷಕ ಸದಸ್ಯ ಮುದ್ದೂರು ಬಾಲಕೃಷ್ಣ ವೈದ್ಯ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಅವರನ್ನು ಗೌರವಿಸಲಾಯಿತು.
ಸಹಕಾರಿ ಉಪಾಧ್ಯಕ್ಷ ರವೀಶ್ ಶೆಟ್ಟಿ, ನಿರ್ದೇಶಕರಾದ ಜಯಕರ, ದೀಕ್ಷಿತ್ ನಾಯಕ್, ಗಣೇಶ ಶೆಟ್ಟಿ, ಮಹೇಶ್, ಸಂದೇಶ್ ಕುಲಾಲ್, ನವೀನ್ ಶೆಟ್ಟಿ, ವಿಜಯಕುವಾರ್, ರೇಷ್ಮಾ, ವಿನೋದಾ, ಕೆ.ಗಣೇಶ್, ಸಿಇಒ ನರೇಂದ್ರ ಎಸ್., ವ್ಯವಸ್ಥಾಪಕಿ ರಾಜೇಶ್ರೀ, ಸಿಬ್ಬಂದಿ ಪ್ರಸನ್ನ, ರಾಘವೇಂದ್ರ ಇದ್ದರು. ರಾಜೇಶ್ರೀ ವರದಿ ಮಂಡಿಸಿದರು. ನವೀನ್ ಸ್ವಾಗತಿಸಿದರು. ಮಹೇಶ್ ನೋಟಿಸ್ ದಾಖಲಿಸಿದರು. ನರೇಂದ್ರ ನಿರೂಪಿಸಿದರು.