ಶಾಂತಶ್ರೀ ಪ್ರಶಸ್ತಿಗೆ ಡಾ.ಅಜಯಸಿಂಗ್, ಪ್ರೊ.ಚನ್ನಾರಡ್ಡಿ ಆಯ್ಕೆ

Published on

ಕನ್ನಡ ಭವನದಲ್ಲಿ ೧೨ರಂದು ಸಮಾರಂಭ * ದಿ.ಶಾಂತಪ್ಪ ನರಿಬೋಳ್ ಸ್ಮರಣಾರ್ಥ ಆಯೋಜನೆ ಎಂ.ಎಸ್.ಪಿ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನಗರದ ಕನ್ನಡ ಭವನದಲ್ಲಿ ಸೆಪ್ಟೆಂಬರ್ ೧೨ರಂದು ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ದಿ.ಶಾಂತಪ್ಪ ಪಾಟೀಲ್ ನರಿಬೋಳ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರಿಬೋಳರು ಉತ್ತಮ ವಾಗ್ಮಿಯಾಗಿದ್ದರು. ಹೀಗಾಗಿ ಅವರ ದಿ.ಶಾಂತಪ್ಪ ಪಾಟೀಲ್ ನರಿಬೋಳ್ ಸ್ಮರಣಾರ್ಥ ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದರು.
ಪ್ರತಿಷ್ಠಾನದಿAದ ಈ ಬಾರಿ ಕೊಡಮಾಡುವ ಶಾಂತಶ್ರೀ ಪ್ರಶಸ್ತಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್, ಶಿP್ಷÀಣ ಪ್ರೇಮಿ, ಸರ್ವಜ್ಞ ಶಿಕಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ.ಚನ್ನಾರಡ್ಡಿ ಪಾಟೀಲ್ ಆಯ್ಕೆಯಾಗಿದ್ದಾರೆ. ೧೨ರಂದು ಸಂಜೆ ೫ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಯಾದಗಿರಿ ಜಿಲ್ಲೆಯ ದೇವಾಪೂರ್ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಹಾಗೂ ಸ್ಟೇಷನ್ ಬಬಲಾದ ಬೃಹನ್ಮಠದ ಪೂಜ್ಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅತನೂರ-ಅಂಕಲಗಿ ಸಂಸ್ಥಾನ ಹಿರೇಮಠದ ಅಭಿನವ ಗುರುಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ಬಿಜೆಪಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ ಉದ್ಘಾಟಕರಾಗಿ ಪಾಲ್ಗೊಳ್ಳುತ್ತಾರೆ.. ಕಾಂಗ್ರೆಸ್ ಮುಖಂಡ ಸಿದ್ದಲಿಂಗ ರಡ್ಡಿ, ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ಆನಂದ ದಂಡೋತಿ, ಕಸಾಪ ಜಿ¯್ಲÁಧ್ಯP್ಷÀ ವಿಜಯಕುಮಾರ ಪಾಟೀಲï ತೇಗಲತಿಪ್ಪಿ, ಮಹ್ಮದ್ ಅಜಮತ್, ವಿಜಯಕುಮಾರ, ಕೇದಾರಲಿಂಗಯ್ಯ ಹಿರೆಮಠ್ ಮುಖ್ಯ ಅತಿಥಿಗಳಾಗಿರುವರು.. ಈ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಕೆಲಸ ಮಾಡುವ ೨೦ ಜನರನ್ನು ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಗುವುದು ಎಂದು ಹೇಳಿದರು.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನೆಲೆಯನ್ನು ಮತ್ತಷ್ಟು ಭದ್ರಗೊಳಿಸುವಲ್ಲಿ ಅಪಾರ ಶ್ರಮವಹಿಸಿರುವ ಲಿಂ.ಶಾAತಪ್ಪ ಪಾಟೀಲ್ ನರಿಬೋಳ್ ಅವರು ಧಾರ್ಮಿಕ ಕ್ಷೇತ್ರಗಳಲ್ಲೂ ಆಧ್ಯಾತ್ಮಿಕ ವಿಷಯಗಳ ಜತೆಗೆ ಕನ್ನಡದ ಉಳಿವು ಜನಜಾಗೃತಿ ಮೂಡಿಸುವ ಕಾರ್ಯ ಬದುಕಿನುದ್ದಕ್ಕೂ ಮಾಡಿದ್ದಾರೆ.
ಶರಣಗೌಡ ಪೋಲಿಸ್ ಪಾಟೀಲ್ ನರಿಬೋಳ್, ಪರಶುರಾಮ ದೇಸಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net