

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸರ್ಕಾರವು ಆಯಾ ವಿಭಾಗ ಮತ್ತು ಜಿ¯್ಲೆಗಳಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಅವರ ಬದುಕು, ಸಾಧನೆ, ಚಿಂತನೆಗಳನ್ನು ಸಮಾಜಕ್ಕೆ ತಲುಪಿಸಲು ಅನೇಕ ಪ್ರತಿಷ್ಠಾನಗಳನ್ನು ಸ್ಥಾಪಿಸಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದ ಯಾವುದೇ ಜಿ¯್ಲÉಯಲ್ಲೂ ಒಂದೂ ಪ್ರತಿಷ್ಠಾನವಿಲ್ಲ. ಹೀಗಾಗಿ ಕಲಬುರಗಿಯಲ್ಲಿ ದಿ.ಚನ್ನಣ್ಣ ವಾಲೀಕಾರ, ರಾಯಚೂರಿನಲ್ಲಿ ದಿ.ಶಾಂತರಸ ಅವರ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ ಆಗ್ರಹಿಸಿದರು.
ರಾಜ್ಯದಲ್ಲಿ ೨೭ ಪ್ರತಿಷ್ಠಾನಗಳಿವೆ. ಆದರೆ ನಮ್ಮ ಭಾಗದಲ್ಲಿ ಒಂದೂ ಇಲ್ಲ. ಡಾ.ನಂಜುಡಪ್ಪ ವರದಿಯಲ್ಲಿಯೂ ಈ ಪ್ರಾದೇಶಿಕ ಅಸಮಾನತೆ ಸರಿಪಡಿಸುವ ಅನಿವಾರ್ಯತೆ ದಾಖಲಿಸಿz್ದÁರೆ. ನಮ್ಮಲ್ಲೂ ಅನೇಕ ಸಾಹಿತಿಗಳು, ಸಂಗೀತಗಾರರು, ಕಲಾವಿದರು ಕನ್ನಡ ಉಳಿಸಿ, ಬೆಳೆಸಿ ಕಣ್ಮರೆಯಾಗಿz್ದÁರೆ. ಅವರ ಚಿಂತನೆಗಳನ್ನು ಇಂದಿನ ಪೀಳಿಗೆಗೆ ತಲುಪಿಸಲು ಪ್ರತಿಷ್ಠಾನಗಳನ್ನು ಸ್ಥಾಪಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಂಗ ಸಂಗಮ ಕಲಾವೇದಿಕೆ ಅಧ್ಯಕ್ಷೆ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ೧೪ ಅಕಾಡೆಮಿ, ಅದರಲ್ಲಿ ೬ ಮಾತ್ರ ರಾಜ್ಯದಾದ್ಯಂತ ಅನ್ವಯವಾಗುತ್ತವೆ. ಉಳಿದವು ಪ್ರಾದೇಶಿಕ. ಹೀಗಾಗಿ ಈ ಸಾಹಿತ್ಯಿಕ ಅನ್ಯಾಯ ಸರಿಪಡಿಸಲು ನಮ್ಮಲ್ಲೂ ಪ್ರತಿಷ್ಠಾನ ಸ್ಥಾಪಿಸಬೇಕು. ಶೀಘ್ರದ¯್ಲÉÃ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಸಾಹಿತಿಗಳಾದ ಅಪ್ಪಾರಾವ್ ಅಕ್ಕೋಣಿ, ಎಸ್.ಪಿ.ಸುಳ್ಳದ ಇತರರಿದ್ದರು.