ಶಂಕರಾಚಾರ್ಯರ ಜಯಂತಿ ಮಹೋತ್ಸವ ಸಂಪನ್ನ

03.NJD NEWS 03
ನಂಜನಗೂಡಿನಲ್ಲಿ ಆಚಾರ್ಯ ಶಂಕರ ಭಗವತ್ಪಾದರ ಜಯಂತಿ ಕಾರ್ಯಕ್ರಮ ಹಿನ್ನೆಲೆ ಪೂಜೆ ಮತ್ತು ಮೆರವಣಿಗೆ ನಡೆಸಲಾಯಿತು.
Published on

ನಂಜನಗೂಡು: ಪಟ್ಟಣದ ಶಂಕರಮಠದಲ್ಲಿ ಐದು ದಿನಗಳ ಕಾಲ ನಡೆದ ಶಂಕರ ಜಯಂತಿ ಮಹೋತ್ಸವ ಶ್ರೀಕಂಠೇಶ್ವರ ಮಂಟಪ ಉತ್ಸವಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.

ಸೋಮವಾರದಿಂದ ಸ್ಥಳೀಯ ಶಂಕರ ಮಠದಲ್ಲಿ ಆರಂಭಗೊಂಡ ಆಚಾರ್ಯ ಶಂಕರ ಭಗವತ್ಪಾದರ ಜಯಂತಿ ಪ್ರತಿ ದಿನದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಗುರುವಾರ ವಿವಿಧ ರಂಗಗಳ ಸಾಧಕರನ್ನು ಶ್ರೀ ಮಠದಿಂದ ಗೌರವಿಸಲಾಯಿತು. ಶುಕ್ರವಾರ ಬೆಳಗ್ಗೆ ಆಚಾರ್ಯರ ಉತ್ಸವ ಮೂರ್ತಿಯನ್ನು ದಕ್ಷಿಣ ಕಾಶಿಯ ರಥ ಬೀದಿಗಳಲ್ಲಿ ವೇದ ಘೋಷದೊಂದಿಗೆ ಮೆರವಣಿಗೆ ನಡೆಸಲಾಯಿತು. ವಾಡಿಕೆಯಂತೆ ಶ್ರೀಕಂಠೇಶ್ವರ ಉತ್ಸವ ಮೂರ್ತಿಯನ್ನು ಮಠಕ್ಕೆ ತಂದು ಅಲ್ಲಿ ಶಂಕಾರಾಚಾರ್ಯರ ಉತ್ಸವ ಮೂರ್ತಿಯ ಎದುರು ಪ್ರತಿಷ್ಠಾಪಿಸಿ ಶ್ರೀಕಂಠೇಶ್ವರ ಮಂಟಪೋತ್ಸವವನ್ನು ದೇವಾಲಯದ ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಸಿ ಈ ಸಾಲಿನ ಶಂಕರಾಚಾರ್ಯರ ಜಯಂತಿಗೆ ಮಂಗಳ ಹಾಡಲಾಯಿತು.

ಮಂಟಪೋತ್ಸವಕ್ಕೆ ಮಠದ ಧರ್ಮಾಧಿಕಾರಿ ರಾಮಚಂದ್ರ ಚಾಲನೆ ನೀಡಿದರು. ಅರ್ಚಕ ರಾಘವೇಂದ್ರ, ಶಂಕರ್ ದೀಕ್ಷಿತ್, ಕಾರ್ತಿಕ್ ದೀಕ್ಷಿತ್, ವಳಗುಡಿ ಶಿವಣ್ಣ, ಗಣೇಶ, ರಾಧಾಕೃಷ್ಣ, ರಾಮಗೊಪಾಲ್, ಮೈಸೂರಿನ ವಿಜಯನಗರದ ಸಪ್ತಮಾತೃಕಾ ದೇವಾಲಯದ ಸಂಸ್ಥಾಪಕ ಭಾಸ್ಕರ್, ನಂಜನಗೂಡು ಬ್ರಾಹ್ಮಣ ಧರ್ಮಸಹಾಯ ಸಭಾ ತಾಲೂಕು ಅಧ್ಯಕ್ಷ ಗೋವರ್ಧನ್, ಈ.ಆರ್.ರಾಮ್‌ಮೋಹನ್ ಸುಬ್ರಮಣ್ಯ, ಶೇಷ ಪ್ರಸಾದ, ಉಮೇಶ, ರಂಗನಾಥ, ಬಾಲಕುಮಾರ್, ರಮೇಶ, ಜಯಂತಿ, ವಿಜಯಾ, ಲಕ್ಷ್ಮೀ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net