

ಇಟಗಿ: ಸಮೀಪದ ಬಿಳಕಿ&ಅವರೊಳ್ಳಿ ರುದ್ರಸ್ವಾಮಿ ಮಠದಲ್ಲಿ ಮಾ.10ರಂದು ಲಿಂಗೆಕ್ಯ ಶಾಂಡಿಲ್ಯ ಸ್ವಾಮೀಜಿ 8ನೆಯ ಪುಣ್ಯಾರಾಧನೆ ಕಾರ್ಯಕ್ರಮ ಶ್ರೀಮಠದ ಪೀಠಾಧ್ಯ ಚನ್ನಬಸವ ದೇವರ ನೇತತ್ವದಲ್ಲಿ ಜರುಗಲಿದೆ. ಸಂಜೆ 6 ಗಂಟೆಗೆ ಮಹಾರುದ್ರಯಾಗ, ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ನಂತರ ಧರ್ಮಸಭೆ, ಆಧ್ಯಾತ್ಮಿಕ ಪ್ರವಚನ, ಮತ್ತು ವಿವಿಧ ಸಾಂಸತಿಕ ಕಾರ್ಯಕ್ರಮ, ರಂಗ ಗೀತೆ, ಸಂಗೀತ ಕಾರ್ಯಕ್ರಮ ಜರುಗಲಿವೆ. ಶಾಸಕ ವಿಠ್ಠಲ ಹಲಗೇಕರ ಇತರರು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.