

ಇಟಗಿ: ಸಮೀಪದ ಅವರೊಳ್ಳಿ ರುದ್ರಸ್ವಾಮಿ ಮಠದಲ್ಲಿ ಲಿಂಗೆಕ್ಯ ಶಾಂಡಿಲ್ಯ ಮಹಾಸ್ವಾಮಿಗಳ 8ನೇ ಪುಣ್ಯಾರಾಧನೆ ಮಾ.10ರಂದು ಜರುಗಲಿದೆ ಎಂದು ಖಾನಾಪುರ ಲೆಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಹೇಳಿದರು.
ಸಮೀಪದ ಅವರೊಳ್ಳಿ ರುದ್ರಸ್ವಾಮಿ ಮಠದಲ್ಲಿ ಮಂಗಳವಾರ ಪ್ರಚಾರ ಸಾಮಗ್ರಿ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶ್ರೀಮಠದ ಪೂಜ್ಯರು ಪ್ರತಿವರ್ಷ ಪುಣ್ಯಾರಾಧನೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಯೋಜನೆ ಮಾಡಿ ಜನರಲ್ಲಿ ಜಾಗತಿ ಉಂಟು ಮಾಡುತ್ತಿದ್ದಾರೆ. ಸತ್ಸಂಗದಲ್ಲಿದ್ದು ಸಾರ್ಥಕ ಜೀವನ ನಡೆಸಬೇಕು ಎಂದರು.
ಮಠದ ಪೀಠಾಧ್ಯ ಚನ್ನಬಸವ ದೇವರು ಮಾತನಾಡಿ, 10ರಂದು ಸಂಜೆ 6 ಗಂಟೆಗೆ ಮಹಾರುದ್ರಯಾಗ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು ನಂತರ ಧರ್ಮ ಸಭೆ ಹಾಗೂ ವಚನ ನತ್ಯ ಮತ್ತು ಜಾನಪದ ಹಾಗೂ ಭಾವಗೀತೆಗಳ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಆಗಮಿಸಿ ಗುರುವಿನ ಕಪೆಗೆ ಪಾತ್ರರಾಗಬೇಕು ಎಂದರು.
ಮಹಾಂತೇಶ ರಾಹುತ, ವಿಜಯ ಸಾಣಿಕೊಪ್ಪ, ದಶರಥ ಬನೋಶಿ, ಅಶೋಕ ಕೊಡೊಳ್ಳಿ, ವಿಠ್ಠಲ ಹಿಂಡಲಕರ, ಮಂಜು ಅಂಕಲಗಿ, ಅಮಿತ ಕುಂದೇಕರ, ಬಿಷ್ಟಪ್ಪ ಬನೋಶಿ ಇತರರು ಇದ್ದರು.