ಉಪಾಧ್ಯಕ್ಷೆಯಾಗಿ ಗೌರಮ್ಮ ಅವಿರೋಧವಾಗಿ ಆಯ್ಕೆ

 ಶಾನಾವಾಸಪುರ ಗ್ರಾಪಂ ಗ್ರಾಪಂ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಗೌರಮ್ಮ ಈರಪ್ಪ ಅವರನ್ನು ಸನ್ಮಾನಿಸಲಾಯಿತು.
ಶಾನಾವಾಸಪುರ ಗ್ರಾಪಂ ಗ್ರಾಪಂ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಗೌರಮ್ಮ ಈರಪ್ಪ ಅವರನ್ನು ಸನ್ಮಾನಿಸಲಾಯಿತು.
Published on

ಸಿರಿಗೇರಿ: ಶಾನಾವಾಸಪುರ ಗ್ರಾಪಂ ಗ್ರಾಪಂ ಉಪಾಧ್ಯಕ್ಷೆಯಾಗಿ ಗೌರಮ್ಮ ಈರಪ್ಪ(ಸಾಮಾನ್ಯ ಮಹಿಳೆ) ಅವಿರೋಧವಾಗಿ ಬುಧವಾರ ಆಯ್ಕೆಯಾದರು.

ಅಧ್ಯಕ್ಷೆ ಆಯ್ಕೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ

21 ಗ್ರಾಪಂ ಸದಸ್ಯರ ಬಲವನ್ನು ಹೊಂದಿದೆ. ಅಧ್ಯಕ್ಷ ಆಯ್ಕೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಚುನಾವಣೆ ನಡೆದಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಈರಪ್ಪ ಒಬ್ಬರು ಮತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೃಷಿ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್ ಘೋಷಿಸಿದರು. ಬಳಿಕ ಉಪಾಧ್ಯಕ್ಷೆಗೆ ಸನ್ಮಾನಿಸಿ, ಸಂಭ್ರಮಾಚರಣೆ ಮಾಡಲಾಯಿತು.

ಪಂಚಾಯಿತಿ ರಾಜ್ ಸಹಾಯಕ ಅಧಿಕಾರಿ ಪಿ.ಬಸವರಾಜ್, ಗ್ರಾಪಂ ಸದಸ್ಯರಾದ ಬಿ.ನಾಗರುದ್ರಗೌಡ, ಕುಮಾರ್ ರಾಜೇಗೌಡ, ಶರಣೆಗೌಡ, ಚಂದ್ರೇಗೌಡ, ಯತ್ನಟ್ಟಿ ನಾಗರಾಜ, ಬೈಲೂರು ನಾಗರಾಜ್, ನಡಿವಿ ನಾಗರಾಜ, ನಡಿವಿ ರಾಮಪ್ಪ, ಕಡೆಮನೆ ಅಯ್ಯಪ್ಪ, ಜಿ.ವೀರನಗೌಡ ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net