More

    ಈ ಸಲವೂ ಹರ್​ ಘರ್​ ತಿರಂಗ ಅಭಿಯಾನ, ಲೋಕಸಭಾ ಚುನಾವಣೆಯಲ್ಲಿ ಗೆಲ್ತೇವೆ 350ಕ್ಕೂ ಅಧಿಕ ಸ್ಥಾನ: ಜೋಶಿ

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಈ ಸಲವೂ ಹರ್​ ಘರ್ ತಿರಂಗ ಅಭಿಯಾನ ಹಮ್ಮಿಕೊಳ್ಳಲಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. ಈ ವರ್ಷವೂ ಆ. 15ರಂದು ಹರ್ ಘರ್ ತಿರಂಗ ಅಭಿಯಾನ ನಡೆಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೂಚನೆ ನೀಡಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಈ ಅಭಿಯಾನ ನಡೆಯಲಿದೆ ಎಂದು ಜೋಶಿ ತಿಳಿಸಿದರು.

    ಇದನ್ನೂ ಓದಿ: ‘ಮನೆಯಲ್ಲೇ ಇರು ಅಂತ ಹೇಳು, ಚಳಿಗಾಲ ಅಲ್ವಾ?’: ಸಿಎಂ ಹೀಗಂದಿದ್ದು ಯಾಕೆ-ಯಾರಿಗೆ?

    ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ನಮ್ಮ ಮೊದಲ ಅವಧಿಯಲ್ಲೂ ವಿರೋಧ ಪಕ್ಷದವರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಆದರೆ 2019ರಲ್ಲಿ ನಮ್ಮ ಸಂಸದರ ಸಂಖ್ಯೆ 282ರಿಂದ 303ಕ್ಕೆ ಏರಿತು. ಅವರು ಬೇಕಿದ್ದರೆ ಈ ಸಲವೂ ಅವಿಶ್ವಾಸ ಮಂಡನೆಗೆ ಮುಂದಾಗಲಿ, ಈ ಬಾರಿ ನಾವು 350ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.

    ಇದನ್ನೂ ಓದಿ: ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಬಿಜೆಪಿ ಸಂಸದೀಯ ಪಕ್ಷದ ಸಭೆ ಕುರಿತು ಮಾತನಾಡಿದ ಜೋಶಿ, ವಿರೋಧ ಪಕ್ಷಗಳು ಮುಂದಿನ ವರ್ಷಗಳಲ್ಲೂ ವಿರೋಧಪಕ್ಷದಲ್ಲೇ ಇರುವಂತೆ ವರ್ತಿಸುತ್ತಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ ಎಂದರು. ಜಗತ್ತು ನಮ್ಮ ಮೇಲೆ ವಿಶ್ವಾಸ ಇಡುತ್ತಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ಮೂರನೇ ಅವಧಿಯಲ್ಲಿ ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಲಿದ್ದೇವೆ ಎಂಬುದಾಗಿ ಮೋದಿ ಹೇಳಿದ್ದಾರೆ ಎಂದು ಜೋಶಿ ತಿಳಿಸಿದರು.

    ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts