ಎಐಸಿಸಿ ಅಧ್ಯಕ್ಷ ಖರ್ಗೆಗೆ ಅವಮಾನ, ಕಾಂಗ್ರೆಸ್ ದಲಿತ ವಿರೋಧಿ ಎಂದ ಸಂಸದ ರಮೇಶ ಜಿಗಜಿಣಗಿ

ramesh jigajinagi
Published on

ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಬಾಬಾಸಾಹೇಬರ ಹೆಸರನ್ನು ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ದಲಿತರಿಗಾಗಿ ಏನು ಮಾಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು.

ಕಾಂಗ್ರೆಸ್ ದಲಿತ ವಿರೋಧಿ ಎಂಬುದಕ್ಕೆ ಇತಿಹಾಸ ಪುಟ ತೆಗೆದು ನೋಡಿದರೆ ಗೊತ್ತಾಗಲಿದೆ. ಅಂಬೇಡ್ಕರ್ ವಿಷಯದಲ್ಲಿ ಕಾಂಗ್ರೆಸ್ ನಡೆದುಕೊಂಡಿದ್ದು ಹೇಗೆ ಎಂಬುದು ಜನಸಾಮಾನ್ಯರಿಗೆ ತಿಳಿಯದ ಸಂಗತಿ ಏನಲ್ಲ. ಅಲ್ಲದೇ, ದಲಿತರಿಗೆ ಮೀಸಲಾದ ಅನುದಾನದ ದುರ್ಬಳಕೆ ಮಾಡಿಕೊಂಡಿರುವುದು ಜಗಜ್ಜಾಹೀರು. ಅಷ್ಟೇ ಏಕೆ ಇತ್ತೀಚೆಗೆ ಕೇರಳದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಬಿಟ್ಟು ಹೋಗಿ ಅವಮಾನಿಸಲಿಲ್ಲವೇ? ಆ ವಿಡಿಯೋದಲ್ಲಿ ಖರ್ಗೆ ಅವರ ಸ್ಥಿತಿ ನೋಡಿದರೆ ಗೊತ್ತಾಗಲಿದೆ-ಕಾಂಗ್ರೆಸ್ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು. ಪಕ್ಷದ ಅಧ್ಯಕ್ಷರನ್ನೇ ಬಿಟ್ಟು ಗಾಂಧಿ ಕುಟುಂಬದವರು ನಾಮಪತ್ರ ಸಲ್ಲಿಸುತ್ತಿದ್ದರೆ ಪಾಪ ಖರ್ಗೆ ಅವರು ಕಿಟಕಿಯಲ್ಲಿ ನಿಂತು ನೋಡುತ್ತಿದ್ದರು. ಇದೇನಾ ದಲಿತಪರ ಕಾಳಜಿ ಎಂದರು.

ಇನ್ನು ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಗಜಿಣಗಿ, ಪಕ್ಷದಲ್ಲಿ ಕೆಲವರು ಯತ್ನಾಳರನ್ನು ತೆಗೆಯಿರಿ ಎಂದರೆ ಇನ್ನೂ ಕೆಲವರು ರಾಜ್ಯಾಧ್ಯಕ್ಷ ವಿಜಯೇಂದ್ರನನ್ನೇ ತೆಗೆಯಿರಿ ಎನ್ನುತ್ತಿದ್ದಾರೆ. ನಾನು ಯಾರ ಪರವೂ ವಕಾಲತ್ತು ವಹಿಸುವವನಲ್ಲ. ಪಕ್ಷ ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದರೆ ನೋಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net