ಯೋಜನೆಯಿಂದ ವೈಯಕ್ತಿಕ ಜೀವನ ಅಭಿವೃದ್ಧಿ : ಆನಂದ ಎ. ವಿಶ್ಲೇಷಣೆ

New Project (29)
Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪಾಣೆಮಂಗಳೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಶಂಭೂರು ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ಲಾಭಾಂಶ ವಿತರಣೆ ಕಾರ್ಯಕ್ರಮ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ನಾಯ್ಕ ಅಧ್ಯಕ್ಷತೆಯಲ್ಲಿ ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ಭಾನುವಾರ ನಡೆಯಿತು.

ವ್ಯಾಯಾಮ ಶಾಲೆಯ ಅಧ್ಯಕ್ಷ ಆನಂದ ಎ. ಮಾತನಾಡಿ, ಯೋಜನೆಯ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಿಕೊಂಡರೆ ವೈಯಕ್ತಿಕ ಜೀವನದ ಅಭಿವೃದ್ಧಿಯಾಗುತ್ತದೆ. ಸಾಮಾಜಿಕವಾಗಿ ವೃತ್ತಿ ಬದುಕಿಗೆ ಮಾಹಿತಿ, ಮಾರ್ಗದರ್ಶನ ಸಂಸ್ಥೆಯ ಮೂಲಕ ನೀಡಲಾಗುತ್ತದೆ ಎಂದರು.

ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಮಾಹಿತಿ ನೀಡಿದರು. 35 ಸಂಘಗಳಿಗೆ ಲಾಭಾಂಶ ವಿತರಿಸಲಾಯಿತು. ನರಿಕೊಂಬು ಗ್ರಾಪಂ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಪ್ರಕಾಶ್ ಮಡಿಮುಗೇರು, ಜನಜಾಗೃತಿ ಸದಸ್ಯ ಪುರುಷೋತ್ತಮ ನಾಟಿ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ವಾಮನ ಕುಲಾಲ್, ಹೇಮಲತಾ, ವಲಯ ಮೇಲ್ವಿಚಾರಕಿ ಅಮಿತಾ, ಒಕ್ಕೂಟದ ಸೇವಾಪ್ರತಿನಿಧಿ ಲಕ್ಷ್ಮೀ, ಒಕ್ಕೂಟದ ಪದಾಧಿಕಾರಿಗಳಾದ ಬಬಿತಾ, ನಳಿನಿ, ಲಿಖಿತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net