

ಕೋಟ: ಗಿಳಿಯಾರು ಶಾಂಭವೀ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಶತಪರ್ವ ಮನವಿ ಪತ್ರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಬಿಡುಗಡೆಗೊಳಿಸಿದರು.
ಶಾಂಭವೀ ಶಾಲೆ ನಾನು ಕಲಿತ ಶಾಲೆ ಎಂಬ ಹೆಮ್ಮ ನನಗಿದೆ. ಶಾಲೆ ಸರ್ವತೋಮುಖ ಶ್ರೇಯಸ್ಸು ಕಾಣವಂತಾಗಲು ಶಾಲಾ ಆಡಳಿತ ಮಂಡಳಿ, ಹಳೇ ವಿದ್ಯಾರ್ಥಿ ಸಂಘ ಶ್ರಮಿಸಲಿ ಎಂದು ಹಾರೈಸಿದರು.
ಶಾಲಾಡಳಿತ ಮಂಡಳಿ ಅಧ್ಯಕ್ಷ ಕೆ.ರಾಜಾರಾಂ ಐತಾಳ್, ಸಂಚಾಲಕ ಸಚಿನ್ ಕಾರಂತ, ಮುಖ್ಯ ಶಿಕ್ಷಕ ದಿವಾಕರ್ ರಾವ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸದಾನಂದ ಪೂಜಾರಿ, ಜತೆ ಕಾರ್ಯದರ್ಶಿ ರವೀಂದ್ರ ಕೋಟ, ಸದಸ್ಯರಾದ ರಾಘವೇಂದ್ರ ಪೂಜಾರಿ, ಪ್ರದೀಪ್, ಶಾಲಾಭಿವೃದ್ಧಿ ಸಮಿತಿ ಪ್ರಮುಖರಾದ ಶ್ರೀಕಾಂತ್ ಶೆಣೈ, ಸತೀಶ್ ಜಿ.ಹೆಗ್ಡೆ ಮತ್ತಿತರರು ಇದ್ದರು.