ಎಂ.ಬಿ. ಪಾಟೀಲ್ ವಿರುದ್ಧ ಶಾಮನೂರು ಕಿಡಿ: ಮುಂದಿನ ಚುನಾವಣೆ ಕಷ್ಟವಾದೀತು ಎಂದು ಎಚ್ಚರಿಕೆ?

shamanuru
Published on

ದಾವಣಗೆರೆ: ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮ ವಿಷಯವನ್ನು ಮತ್ತೆ ಕೆದಕಿದ ಸ್ವಪಕ್ಷ ಶಾಸಕ ಎಂ.ಬಿ.ಪಾಟೀಲ್ ವಿರುದ್ಧ ಕಾಂಗ್ರೆಸ್‌ನ ಹಿರಿಯ ಶಾಸಕರೂ ಆದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಕಿಡಿ ಕಾರಿದ್ದಾರೆ.

ಯಾರೇನೇ ಹೇಳಿದರೂ ವೀರಶೈವ ಲಿಂಗಾಯತರು ಒಂದೇ ಎಂಬ ಮಹಾಸಭಾದ ನಿಲುವು ಬದಲಾಗದು. ನಮ್ಮ ವಾದವನ್ನು ಸಮಾಜದ ಮುಖಂಡರು ಕೂಡ ಒಪ್ಪಿದ್ದಾರೆ ಎಂದು ದಾವಣಗೆರೆಯಲ್ಲಿ ಶುಕ್ರವಾರ ರಾತ್ರಿ ತಿಳಿಸಿದರು.

ಪ್ರತ್ಯೇಕ ಧರ್ಮದ ವಿಷಯದಲ್ಲಿ ಇದುವರೆಗೆ ಏನೇನಾಗಿದೆ ಎಂಬುದರ ಅರಿವು ಎಲ್ಲರಿಗೂ ಇದೆ. ಆದರೂ ಅದೇಕೋ ಎಂ.ಬಿ. ಪಾಟೀಲ್ ಮಾತ್ರ ಇನ್ನೂ ಅದರಿಂದ ಹೊರಗೆ ಬಂದಂತಿಲ್ಲ. ಹೀಗೇ ಮಾತನಾಡುತ್ತ ಹೋದರೆ ಮುಂದೆ ಅವರ ಕ್ಷೆತ್ರದಲ್ಲಿ ಅವರು ಗೆಲ್ಲುವುದು ಕಷ್ಟವಾದೀತು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net