ಶೈಣಿಕ ಪ್ರಗತಿಗೆ ಪ್ರಯತ್ನ

23GKK3
Published on

ಗೋಕಾಕ: ೇತ್ರದ ವಿದ್ಯಾರ್ಥಿಗಳ ಶೈಣಿಕ ಪ್ರಗತಿಗಾಗಿ ಹಲವಾರು ಯೋಜನೆ ಅನುಷ್ಠಾನದೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಯುವನಾಯಕ ಅಮರನಾಥ ಜಾರಕಿಹೊಳಿ ಹೇಳಿದರು.

ನಗರದ ಶಾಸಕರ ಗೃಹ ಕಚೇರಿಯಲ್ಲಿ ೇತ್ರದ ಮೂರು ಸರ್ಕಾರಿ ಶಾಲೆಗಳು ಪಿಎಂಎಸ್​ ಯೋಜನೆಗೆ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಶಿಣ ಇಲಾಖೆ ಮತ್ತು ಎಸ್​ಡಿಎಂಸಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಗೋಕಾಕ ಶೈಣಿಕ ವಲಯದ ಕೊಣ್ಣೂರು ಗ್ರಾಮದ ಕೆಬಿಎಸ್​, ಬೆಣಚಿನಮರಡಿಯ ಆರ್​ಎಂಎಸ್​ಎ ಎಚ್​ಪಿಎಸ್​ ಮತ್ತು ಜಿಎಚ್​ಎಸ್​ ಹಾಗೂ ನಗರದ ಸರ್ಕಾರಿ ಪ್ರೌಢಶಾಲೆ (ಜಿಪಿಯುಸಿ) ಸೇರಿ ಒಟ್ಟು ಮೂರು ಶಾಲೆಗಳು ಶಾಸಕರ ಪ್ರಯತ್ನದಿಂದ ಪಿಎಂಎಸ್​ ಯೋಜನೆಗೆ ಆಯ್ಕೆಯಾಗಿದ್ದು, ಐದು ವರ್ಷಗಳಲ್ಲಿ ತಲಾ 2 ಕೋಟಿ ರೂ. ಅನುದಾನದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಶೈಣಿಕ ೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಲವಾಗಿ ವಿದ್ಯಾರ್ಥಿಗಳ ಸಾಧನೆಗೆ ಅವಕಾಶ ಒದಗಿವೆ. ಹೀಗಾಗಿ, ಅಭಿವೃದ್ಧಿಗೆ ಸಹಕಾರ ಅಗತ್ಯವಾಗಿದೆ ಎಂದರು.

ತಹಸೀಲ್ದಾರ್​ ಡಾ.ಮೋಹನ ಭಸ್ಮೆ, ತಾಪಂ ಇಒ ಪರಶುರಾಮ ಸ್ತೆ, ಬಿಇಒ ಜಿ.ಬಿ.ಬಳಗಾರ, ಬಿಸಿಯೂಟ ಯೋಜನಾಧಿಕಾರಿ ಎ.ಬಿ.ಮಲಬನ್ನವರ, ಬಿಜೆಪಿ ತಾಲೂಕಾಧ್ಯ ರಾಜೇಂದ್ರ ಗೌಡಪ್ಪಗೋಳ, ಟಿ.ಆರ್​.ಕಾಗಲ, ಎಂ.ಎಲ್​.ತೋಳಿನವರ, ಭೀಮಗೌಡ ಪೊಲೀಸಗೌಡರ, ಸುರೇಶ ಸನದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net